ಶಿವರಾಜ್ ಕುಮಾರ್ ಗೆ ನಾಯಕಿಯಾಗುತ್ತಿದ್ದಾರೆ ವಿದ್ಯಾ ಪ್ರದೀಪ್

ಮಂಗಳವಾರ, 1 ಮಾರ್ಚ್ 2016 (12:17 IST)
ಕನ್ನಡದಲ್ಲಿ ಖುಷಿ ಖುಷಿಯಾಗಿ ಅನ್ನೋ ಸಿನಿಮಾವನ್ನು ನಿರ್ದೇಶಿಸಿದ್ದ ನಿರ್ದೇಶಕ ಯೋಗಿ ರಾಜ್  ತಮ್ಮ ಖುಷಿ ಖುಷಿ ಸಿನಿಮಾಗೆ ತೆಲುಗಿನ ನಟಿ ನಂದಿನಿ ರೈ ಅವರನ್ನು ಕರೆ ತಂದಿದ್ದರು. ಇದೀಗ ಶಿವಣ್ಣ ಅಭಿನಯಿಸುತ್ತಿರುವ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಸಿನಿಮಾಕ್ಕೂ ಕೂಡ ಪರಭಾಷಾ ನಟಿಯೊಬ್ಬರನ್ನು ಕರೆ ತರುತ್ತಿದ್ದಾರೆ.
 
 ಹೌದು.. ಈ ಬಾರಿ ಯೋಗಿ ರಾಜ್ ತಮಿಳು ಹಾಗೂ ಮಲೆಯಾಳಂ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ವಿದ್ಯಾ ಪ್ರದೇಪ್ ಅವರನ್ನು ಕನ್ನಡಕ್ಕೆ ಕರೆ ತರುತ್ತಿದ್ದಾರೆ.ಸೈವಂ ಹಾಗೇ ಪಸಂಗ -2 ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ವಿದ್ಯಾ ಅವರೇ ಈ ಪಾತ್ರಕ್ಕೆ ಬೇಕು ಅಂತಾ ಯೋಗಿ ಅವರು ಅವರನ್ನು ಕರೆ ತರುತ್ತಿದ್ದಾರೆ. ಅಲ್ಲದೇ ಈ ಪಾತ್ರಕ್ಕೆ ವಿದ್ಯಾ ಅವರು ತುಂಬಾ ಚೆನ್ನಾಗಿ ಒಪ್ಪುತ್ತಾರೆ ಹಾಗಾಗಿ ಅವರೇ ಬೇಕು ಅಂತಾ ಅವರನ್ನು ಈ ಪಾತ್ರಕ್ಕೆ ಕರೆ ತರುತ್ತಿದ್ದೇನೆ ಅಂತಾ ಅವರು ಹೇಳಿದ್ದಾರೆ,.
 
 ಇನ್ನು ಕನ್ನಡದ ನಟಿಯರನ್ನೇ ಯಾಕೆ ಆಯ್ಕೆ ಮಾಡಿಕೊಂಡಿಲ್ಲ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಅವರು ನಾನು ಈ ಪಾತ್ರಕ್ಕಾಗಿ ಅನೇಕ ಕನ್ನಡ ನಟಿಯರನ್ನು ಹುಡುಕಾಡಿದೆ.ಆದ್ರೆ ಈ ಪಾತ್ರಕ್ಕೆ ಒಪ್ಪುವಂತಹ ನಟಿಯರು ನನಗೆ ಸಿಗಲಿಲ್ಲ. ಹಾಗಾಗಿ ವಿದ್ಯಾ ಅವರನ್ನು ಆಯ್ಕೆ ಮಾಡಿಕೊಂಡೆ ಅಂತಾ ಅವರು ಹೇಳಿದ್ದಾರೆ. ಇದೇ ತಿಂಗಳಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗಲಿದೆಯಂತೆ.

ವೆಬ್ದುನಿಯಾವನ್ನು ಓದಿ