ಕತ್ರಿಕಾ ಪ್ರೆಗ್ನೆಂಟ್ ವದಂತಿ ಬೆನ್ನಲ್ಲೇ 'ಬ್ಯಾಡ್ ನ್ಯೂಜ್' ಆನಂದಿಸಿ ಎಂದ ವಿಕ್ಕಿ ಕೌಶಲ್

Sampriya
ಶುಕ್ರವಾರ, 28 ಜೂನ್ 2024 (19:34 IST)
Photo Courtesy X
ಕತ್ರಿಕಾ ಕೈಫ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವದಂತಿಗಳ ನಂತರ ವಿಕ್ಕಿ ಕೌಶಲ್ ಅವರು ತಮ್ಮ ಮುಂಬರುವ ಸಿನಿಮಾ ಬ್ಯಾಡ್ ನ್ಯೂಜ್‌ನ ಟ್ರೇಲರ್ ಲಾಂಚ್‌ ಸಮಾರಂಭದಲ್ಲಿ ಭಾಗವಹಿಸಿದರು.

ಈ ವೇಳೆ ಮಾಧ್ಯಮದವರು ವಿಕ್ಕಿ ಅವರಲ್ಲಿ ವೈಯಕ್ತಿಕ ಗುಡ್‌ ನ್ಯೂಸ್ ಬಗ್ಗೆ ಪ್ರಶ್ನಿಸಿದಾಗ, ಒಳ್ಳೆಯ ಸುದ್ದಿಯನ್ನು ಹಂಚಿಕೊಳ್ಳುವ ಸಮಯ ಬಂದಾಗ ಹಿಂಜರಿಯುವುದಿಲ್ಲ, ಇದೀಗ ಬ್ಯಾಡ್ ನ್ಯೂಜ್ ಅನ್ನು ಆನಂದಿಸಿ ಎಂದು ಸಲಹೆ ನೀಡಿದರು.  

ಯಾವುದೇ ಕಾರಣಕ್ಕೂ ವೈಯಕ್ತಿಕ ಗುಡ್‌ ನ್ಯೂಸ್ ಇಂದಾಗ ಅದನ್ನು ಮಾಧ್ಯಮದ ಮುಂದೆ ಹೇಳಿಕೊಳ್ಳಲು ಹಿಂಜರಿಯುವುದಿಲ್ಲ. ಈ ಮೂಲಕ ಕತ್ರಿಕಾ ಹಾಗೂ ವಿಕ್ಕಿ ಅವರು ತಂದೆ ತಾಯಿಯಾಗುತ್ತಿರುವ ವದಂತಿಗೆ ಸ್ಪಷ್ಟಣೆ ನೀಡಿದರು.

ಕತ್ರಿನಾ ಮತ್ತು ವಿಕ್ಕಿಯ ಲಂಡನ್ ಪ್ರವಾಸದ ಫೋಟೋಗಳು ಮತ್ತು ವೀಡಿಯೊಗಳು ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಫೋಟೋಗಳನ್ನು ನೋಡಿದ ನೆಟ್ಟಿಗರು ಕತ್ರಿನಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆಂಬ ಸುದ್ದಿ ಹಬ್ಬಿಸಿದ್ದರು.  

ಆದರೆ ಕತ್ರಿನಾ ಅವರ ಬಳಗ ಈ ವದಂತಿಯನ್ನು ತಳ್ಳಿಹಾಕಿತು.  ವಿಕ್ಕಿ ಮತ್ತು ಕತ್ರಿನಾ ಡಿಸೆಂಬರ್ 2021 ರಲ್ಲಿ ರಾಜಸ್ಥಾನದಲ್ಲಿ ಖಾಸಗಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬ್ಯಾಡ್ ನ್ಯೂಜ್' ಅನ್ನು ಜುಲೈ 19 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಆನಂದ್ ತಿವಾರಿ ನಿರ್ದೇಶಿಸಿದ, 'ಬ್ಯಾಡ್ ನ್ಯೂಜ್' ವಿಕ್ಕಿ ಕೌಶಲ್ ಜೊತೆಗಿನ ಅವರ ಎರಡನೇ ಚಿತ್ರವಾಗಿದೆ.
‌.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮೊದಲ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಎಂಟ್ರಿ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಇವರೇ

ಅ.25ರಂದು ಅಪ್ಪು ಫ್ಯಾನ್‌ ಡಮ್‌ ಆ್ಯಪ್‌ ಬಿಡುಗಡೆ: ಕಿಚ್ಚ ಸುದೀಪ್ ಧ್ವನಿಯಲ್ಲಿ ಹೊರಬಿತ್ತು ಟ್ರೇಲರ್

BB 12: ಕಿಚ್ಚ ಸುದೀಪ್ ಇದು ಸಾಕಗಲ್ಲ, ಇನ್ನೂ ಬೇಕು, ಇನ್ನೂ ಬೇಕು

ಜೈಲಿನಲ್ಲಿ ನಿಯಮದ ಪ್ರಕಾರ ಎಲ್ಲಾ ಕೊಟ್ಟರೂ ಇಲ್ಲ ಅಂದರಾ ದರ್ಶನ್

BBK12: ಕಿಚ್ಚ ಸುದೀಪ್ ಯಾರಿಗೂ ಹೆದರಲ್ಲ, ಅಶ್ವಿನಿ ಪರವೂ ಅಲ್ಲ: ಇಂದು ಕಾದಿದೆ ಮಾರಿಹಬ್ಬ

ಮುಂದಿನ ಸುದ್ದಿ
Show comments