Webdunia - Bharat's app for daily news and videos

Install App

150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣಹಚ್ಚಿದ ಬಹುಭಾಷಾ ಹಿರಿಯ ನಟ ರಾಜೇಶ್‌ ಇನ್ನಿಲ್ಲ

Sampriya
ಗುರುವಾರ, 29 ಮೇ 2025 (14:38 IST)
Photo Courtesy X
ಚೆನ್ನೈ: ಕಾಲಿವುಡ್‌, ಟಾಲಿವುಡ್‌ ಮತ್ತು ಮಾಲಿವುಡ್‌ನ  150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಹಿರಿಯ ನಟ ರಾಜೇಶ್ (75 ವರ್ಷ) ಇಂದು ಚೆನ್ನೈನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ರಕ್ತದೊತ್ತಡದ ಸಮಸ್ಯೆ ಹೆಚ್ಚಿದ ಬೆನ್ನಲ್ಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ರಾಜೇಶ್​ ನಿಧನರಾದರು. ರಾಜೇಶ್ ಅವರಿಗೆ ಮಗಳು ದಿವ್ಯಾ ಮತ್ತು ಮಗ ದೀಪಕ್ ಇದ್ದಾರೆ. ನಟನ ಪತ್ನಿ ಜೋನ್ ಸಿಲ್ವಿಯಾ ವನತಿರಾಯರ್ 2012ರಲ್ಲಿ ಕುಟುಂಬವನ್ನು ಅಗಲಿದ್ದರು. ರಾಜೇಶ್‌ ನಿಧನಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗದ ಕಲಾವಿದರು ಕಂಬನಿ ಮಿಡಿದಿದ್ದಾರೆ.  

ಸಿನಿಮಾ ಮತ್ತು ದೂರದರ್ಶನ ಎರಡರಲ್ಲೂ ವಿಶಿಷ್ಟ ಅಭಿನಯಕ್ಕೆ ಹೆಸರುವಾಸಿಯಾಗಿದ್ದ ರಾಜೇಶ್‌ ಅವರು ಐದು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಪೋಷಕ ಮತ್ತು ನಾಯಕನ ಪಾತ್ರಗಳಲ್ಲಿ ಅವರು ನಟಿಸಿದ್ದರು. 

ಡಿಸೆಂಬರ್ 20, 1949 ರಂದು ತಿರುವರೂರು ಜಿಲ್ಲೆಯ ಮನ್ನಾರ್ಗುಡಿಯಲ್ಲಿ ಜನಿಸಿದ ರಾಜೇಶ್, ಶಾಲಾ ಶಿಕ್ಷಕರ ಕೆಲಸವನ್ನು ತ್ಯಜಿಸಿ ಚಲನಚಿತ್ರಗಳಲ್ಲಿ ತೊಡಗಿಕೊಂಡಿದ್ದರು.  
ನಿರ್ದೇಶಕ ಕೆ. ಬಾಲಚಂದರ್ ಅವರ ಮೆಚ್ಚುಗೆ ಪಡೆದ ಚಿತ್ರ ಅವಳು ಒರು ತೊಡರಕಥೈ ಸಿನಿಮಾದ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಅವರು, ಆ ಬಳಿಕ ಕಣ್ಣಿಪ್ಪರುವತ್ತಿಲೆ  ಚಿತ್ರದಲ್ಲಿ ಮೊದಲ ಬಾರಿಗೆ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು.

ಕೊನೆಯದಾಗಿ ಅವರು ವಿಜಯ್‌ ಸೇತುಪತಿ ಅವರ ಮೆರಿ ಕ್ರಿಸ್ಮಸ್‌ ಸಿನಿಮಾದಲ್ಲಿ ನಟಿಸಿದ್ದರು. ನಟನಾಗಿ ಮಾತ್ರವಲ್ಲದೆ ಡಬ್ಬಿಂಗ್ ಕಲಾವಿದ, ಬರಹಗಾರ ಮತ್ತು ದೂರದರ್ಶನ ನಟನಾಗಿಯೂ ಸಹ ಅವರು ಗುರುತಿಸಿಕೊಂಡಿದ್ದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಾಹಸಸಿಂಹ ವಿಷ್ಣುವರ್ದನ್ ಸ್ಮಾರಕಕ್ಕಾಗಿ ಕಿಚ್ಚ ಸುದೀಪ್ ಜಾಗ ಖರೀದಿ

ಸಪ್ಪೆ ಮುಖದಲ್ಲಿ ಪತಿ ದರ್ಶನ್ ನೋಡಲು ಬಂದ ವಿಜಯಲಕ್ಷ್ಮಿ

ಬಳ್ಳಾರಿನಾ, ಪರಪ್ಪನಾ ಅಗ್ರಹಾರನಾ: ದರ್ಶನ್‌ಗೆ ಮುಗಿಯದ ಸಂಕಷ್ಟ

₹100ಕೋಟಿ ಕ್ಲಬ್ ಸೇರುತ್ತಾ, ಮತ್ತೊಂದು ಹೊಸ ದಾಖಲೆ ಮಾಡಿದ ಸು ಫ್ರಮ್ ಸೋ

ಮನೆ ಮೇಲೆ ಗುಂಡಿನ ದಾಳಿ ಬಳಿಕ ಮೊದಲ ಬಾರೀ ಪ್ರತಿಕ್ರಿಯಿಸಿದ ಎಲ್ವಿಶ್ ಯಾದವ್‌

ಮುಂದಿನ ಸುದ್ದಿ
Show comments