ಪವಿತ್ರಾ ಗೌಡಗಾಗಿ ಜೈಲು ಸೇರಿದ ದರ್ಶನ್, ಪತಿ ಮೇಲೆ ಬೇಸರದಿಂದ ಪತ್ನಿ ವಿಜಯಲಕ್ಷ್ಮಿ ಕಠಿಣ ನಿರ್ಧಾರ

Krishnaveni K
ಬುಧವಾರ, 12 ಜೂನ್ 2024 (09:09 IST)
ಬೆಂಗಳೂರು: ಒಂದೆಡೆ ಪ್ರೇಯಸಿ ಪವಿತ್ರಾ ಗೌಡಗಾಗಿ ಓರ್ವನನ್ನು ಹತ್ಯೆ ಮಾಡಿದ ಆರೋಪದಲ್ಲಿ ದರ್ಶನ್ ಜೈಲು ಸೇರಿದ್ದರೆ ಇತ್ತ ಅವರ ಮೇಲೆ ಬೇಸರಗೊಂಡ ಪತ್ನಿ ವಿಜಯಲಕ್ಷ್ಮಿ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.

ಪವಿತ್ರಾ ಜೊತೆ ಗಂಡನ ಸಂಬಂಧದ ಬಗ್ಗೆ ವಿಜಯಲಕ್ಷ್ಮಿಗೆ ಮೊದಲಿನಿಂದಲೂ ಅಸಮಾಧಾನವಿತ್ತು. ಹಾಗಿದ್ದರೂ ಇತ್ತೀಚೆಗಿನದ ದಿನಗಳಲ್ಲಿ ದರ್ಶನ್ ಜೊತೆ ವಿಜಯಲಕ್ಷ್ಮಿ ಚೆನ್ನಾಗಿಯೇ ಇದ್ದರು. ಇತ್ತೀಚೆಗಷ್ಟೇ ದಂಪತಿ ದುಬೈಗೆ ತೆರಳಿ ಅದ್ಧೂರಿಯಾಗಿ ವಿವಾಹ ವಾರ್ಷಿಕೋತ್ಸವವನ್ನೂ ಆಚರಿಸಿಕೊಂಡಿದ್ದರು.

ಆದರೆ ಕೆಲವು ದಿನಗಳ ಮೊದಲು ಪವಿತ್ರಾ ನಮ್ಮಿಬ್ಬರ ಸಂಬಂಧಕ್ಕೆ 10 ವರ್ಷ ಎಂದು ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದು ವಿಜಯಲಕ್ಷ್ಮಿಯವರನ್ನು ಕೆರಳಿಸಿತ್ತು. ಇಬ್ಬರ ನಡುವೆ ಸೋಷಿಯಲ್ ಮೀಡಿಯಾ ವಾರ್ ಕೂಡಾ ನಡೆದಿತ್ತು. ಆದರೂ ವಿಜಯಲಕ್ಷ್ಮಿ ಗಂಡನ ಜೊತೆ ಚೆನ್ನಾಗಿಯೇ ಇದ್ದರು.

ಆದರೆ ಈಗ ಪವಿತ್ರಾಗಾಗಿ ದರ್ಶನ್ ಹತ್ಯೆ ಮಾಡಿಸಿದ್ದಾರೆ ಎಂಬ ಸುದ್ದಿ ವಿಜಯಲಕ್ಷ್ಮಿ ಬೇಸರಕ್ಕೆ ಕಾರಣವಾಗಿದೆ. ಇಷ್ಟು ದಿನ ಇನ್ ಸ್ಟಾಗ್ರಾಂನಲ್ಲಿ ದರ್ಶನ್ ಖಾತೆಯನ್ನು ಫಾಲೋ ಮಾಡುತ್ತಿದ್ದ ವಿಜಯಲಕ್ಷ್ಮಿ ಈಗ ಏಕಾಏಕಿ ಪ್ರೊಫೈಲ್ ಫೋಟೋ ಡಿಲೀಟ್ ಮಾಡಿ ದರ್ಶನ್ ರನ್ನೂ ಅನ್ ಫಾಲೋ ಮಾಡಿ ಮೌನಕ್ಕೆ ಶರಣಾಗಿದ್ದಾರೆ. ಗಂಡನ ಬಗ್ಗೆ ಕೇಳಿಬಂದಿರುವ ಆರೋಪಗಳ ಅವರನ್ನು ತೀರಾ ಕುಗ್ಗಿಹೋಗುವಂತೆ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಿಚ್ಚನ್ ಮಾತು ಕೇಳಿ, ಗಿಲ್ಲಿ, ರಕ್ಷಿತಾಗೆ ಕ್ಲಾಸ್ ಪಕ್ಕಾ ಎಂದಾ ನೆಟ್ಟಿಗರು

ನಿಶ್ಚಿತಾರ್ಥ ಮಾಡಿಕೊಂಡ ಉಗ್ರಂ ಮಂಜು ಜೋಡಿ ಭೇಟಿಯಾದ ಗೌತಮಿ ಜಾಧವ್‌

ಜೈ ನಾಳೆ ತೆರೆಗೆ, ಮಾವನ ಸಿನಿಮಾಗೆ ಶುಭ ಹಾರೈಸಿದ ಕೆಎಲ್ ರಾಹುಲ್

ಈ ರೀತಿ ನಡೆದುಕೊಳ್ಳುವುದಕ್ಕೆ ನಾಚಿಕೆಯಾಗುವುದಿಲ್ವ: ಪಾಪರಾಜಿಗಳ ಮೇಲೆ ಸನ್ನಿ ಡಿಯೋಲ್ ಗರಂ

ಲೇಡಿ ಸೂಪರ್ ಸ್ಟಾರ್‌ ನಯನಾತಾರ ದಂಪತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ

ಮುಂದಿನ ಸುದ್ದಿ
Show comments