Publish Date: Thu, 19 Sep 2019 (09:27 IST)
Updated Date: Thu, 19 Sep 2019 (09:29 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸ್ಟಾರ್ ವಾರ್ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಮ್ಮದೇ ಶೈಲಿಯಲ್ಲಿ ವ್ಯಾಖ‍್ಯಾನ ಕೊಟ್ಟಿದ್ದಾರೆ.
ಇಂಡಸ್ಟ್ರಿಯಲ್ಲಿ ಸ್ಟಾರ್ ವಾರ್ ನಡೆಯುತ್ತಿದೆಯಲ್ಲಾ ಅದರ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದ್ದಕ್ಕೆ ಉಪೇಂದ್ರ ಸ್ಟಾರ್ ವಾರ್ ಇರ್ಬೇಕು. ಅದು ಇದ್ರೇ ಚೆನ್ನಾಗಿರುತ್ತಲ್ವಾ? ಎಂದು ಪ್ರತಿಕ್ರಿಯಿಸಿದ್ದಾರೆ.
ಸ್ಟಾರ್ ಗಳ ನಡುವೆ ಸ್ಪರ್ಧೆ, ಪೈಪೋಟಿ ಇರಬೇಕು. ಅದಿದ್ದರೇ ನಮಗೂ ನಿಮಗೂ ಒಳ್ಳೆದಲ್ವಾ? ಸಿನಿಮಾ ಅಂದರೇನೇ ಹಾಗೆ. ಸಿನಿಮಾ ರಂಗದಲ್ಲಿ ರಾಜಕೀಯ ಮಾಡಕ್ಕಾಗಲ್ಲ. ಇಲ್ಲಿ ಅವನು ಬಿಗ್ ಬಜೆಟ್ ಸಿನಿಮಾ ಮಾಡಿದ, ಅವನಿಗಿಂತ ಜಾಸ್ತಿ ನಾನು ಮಾಡಬೇಕು ಎಂಬ ಸ್ಪರ್ಧೆ ಇರಬೇಕು. ಅದರಲ್ಲಿ ತಪ್ಪೇನೂ ಇಲ್ಲ ಎಂದು ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ.