Webdunia - Bharat's app for daily news and videos

Install App

ಮಗನಿಗೆ ಟ್ರೋಫಿ ಕೈತಪ್ಪಿದ್ದಕ್ಕೆ ಗೆದ್ದ ಹನುಮಂತುಗೆ ತ್ರಿವಿಕ್ರಮ್ ತಾಯಿ ಹೀಗೆ ಹೇಳೋದು ಸರೀನಾ

Sampriya
ಮಂಗಳವಾರ, 28 ಜನವರಿ 2025 (15:52 IST)
Photo Courtesy X
ಬಿಗ್‌ಬಾಸ್ ಸೀಸನ್ 11ಕ್ಕೆ ಅದ್ಧೂರಿಯಾಗಿ ತೆರೆಬಿದ್ದಿದ್ದರು, ಇನ್ನೂ ಸ್ಪರ್ಧಿಗಳ  ಹವಾ ಮಾತ್ರ ಕಮ್ಮಿ ಆಗಿಲ್ಲ. ದೊಡ್ಮನೆಯಿಂದ ಹೊರಬಂದಿರುವ ಫೈನಲ್ ಸ್ಪರ್ಧಿಗಳು ಮಾಧ್ಯಮಗಳ ಮುಂದೆ ತಮ್ಮ ಅನುಭವವನ್ನು ಬಿಚ್ಚಿಡುತ್ತಿದ್ದಾರೆ.

ಈ ಮಧ್ಯೆ ರನ್ನರ್ ತ್ರಿವಿಕ್ರಮ್ ತಾಯಿ ವನಜಾಕ್ಷಿ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ.  ಮಾಧ್ಯಮಗಳ ಮುಂದೆ ಹನುಮಂತು ವಿನ್ನರ್ ಆಗಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ರಜತ್ ಇಲ್ಲದಿದ್ದರೆ ನನ್ನ ಮಗ ತ್ರಿವಿಕ್ರಮ್ ವಿನ್ನರ್ ಆಗಲು ಅರ್ಹರು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನು ನೋಡಿದ ನೆಟ್ಟಿಗರು ಇದೇ ಕಾರಣಕ್ಕೆ ನಿಮ್ಮ ಮಗ ತ್ರಿವಿಕ್ರಮ್ ವಿನ್ನರ್ ಆಗಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ಹನುಮಂತನಲ್ಲಿ ನನಗೆ ಏನೂ ಕಾಣಿಸಲಿಲ್ಲ ಅಂತ ವನಜಾಕ್ಷಿ ಹೇಳಿಕೆ ವೈರಲ್ ಆಗಿದೆ.

ಫ್ಯಾಮಿಲಿ ರೌಂಡ್‌ನಲ್ಲಿ ಬಿಗ್‌ಬಾಸ್ ಮನೆಯೊಳಗೆ ಬಂದಿದ್ದ ವನಜಾಕ್ಷಿ ಅವರು ತ್ರಿವಿಕ್ರಮ್ ಗೆಲುವಿನ ದಡ ಸೇರಬೇಕೆಂದು ಕೇಳಿಕೊಂಡಿದ್ದರು. ನೀನು ವಿನ್ನರ್ ಆಗಲೇ  ಬೇಕು ಅದೇ ನನ್ನ ಕನಸು ಎಂದು ಬೇಡಿಕೆಯಿಟ್ಟಿದ್ದರು. ಅದಲ್ಲದೆ ಭವ್ಯ ಆವರನ್ನು ದೂರವಿಟ್ಟು ಆಟದ ಕಡೆ ಗಮನಕೊಡು ಎಂದು ಸಲಹೆ ನೀಡಿದ್ದರು.

ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲೂ ಕಿಚ್ಚ ಸುದೀಪ್ ಅವರು ವನಜಾಕ್ಷಿ ಅವರನ್ನು ಮಾತನಾಡಿಸಿದಾಗ, ಮಗ ವಿನ್ ಆಗಲೇಬೇಕು. ನೀನು ಟ್ರೋಪಿ ತರುತ್ತೀಯಾ ಎಂದು ತ್ರಿವಿಕ್ರಮ್‌ಗೆ ಧೈರ್ಯ ತುಂಬಿದ್ದರು. ಆದರೆ ಇದೀಗ ವನಜಾಕ್ಷಿಗೆ ಭಾರೀ ನಿರಾಸೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments