"ಝೀರೋ" ಚಿತ್ರದ ಟೈಟಲ್ ಟೀಸರ್ ಬಿಡುಗಡೆ: ಕುಬ್ಜನಾದ ಕಿಂಗ್ ಖಾನ್

ramkrishna puranik
ಗುರುವಾರ, 4 ಜನವರಿ 2018 (15:30 IST)
ಕಿಂಗ್ ಖಾನ್ ತಮ್ಮ "ಝೀರೋ" ಚಿತ್ರದ ಟೈಟಲ್ ಟೀಸರ್ ಬಿಡುಗಡೆಗೊಳಿಸಿದ್ದಾರೆ. "ಜಬ್ ತಕ್ ಹೈ ಜಾನ್" ಚಿತ್ರದ 5 ವರ್ಷಗಳ ನಂತರ ಇನ್ನೊಮ್ಮೆ ಬೆಳ್ಳಿತೆರೆಯನ್ನು ಹಂಚಿಕೊಳ್ಳಲಿದ್ದಾರೆ ಬಾಲಿವುಡ್ ಕಿಂಗ್ ಖಾನ್ ಶಾರುಕ್ ಖಾನ್, ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್. ಈ ಮೂವರು ಆನಂದ್ ಎಲ್ ರಾಯ್ ಅವರ "ಝೀರೋ" ಚಿತ್ರದಲ್ಲಿ ಒಂದಾಗಲಿದ್ದಾರೆ.
ಹೊಸ ವರ್ಷದಂದು ಶಾರುಖ್ ಖಾನ್ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಚಿತ್ರದ ಟೀಸರ್ ಅನ್ನು ಬಿಡುಗಡೆಗೊಳಿಸುವ ಮೂಲಕ ಬಹುಕಾಲದಿಂದ ಗೌಪ್ಯವಾಗಿದ್ದ ಚಿತ್ರದ ಹೆಸರನ್ನು ಕೂಡಾ ಬಹಿರಂಗಪಡಿಸಿದ್ದಾರೆ. ಈ ಚಿತ್ರವು ಶಾರುಖ್ ಖಾನ್ ಅವರ ರೆಡ್ ಚಿಲ್ಲಿಸ್ ಎಂಟರ್‌ಟೇನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿದೆ. ಹೊಸ ವರ್ಷದ ಮೊದಲ ದಿನದಂದು "ಝೀರೋ" ಟೈಟಲ್ ಟೀಸರ್ ಬಿಡುಗಡೆಗೊಳಿಸುವ ಮೂಲಕ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ ಬಾಲಿವುಡ್ ಬಾದ್‌ಷಾ ಶಾರುಖ್.
 
ಆನಂದ್ ಎಲ್ ರಾಯ್ ಮತ್ತು ಶಾರುಖ್ ಖಾನ್ ಈ ಇಬ್ಬರ ಜೋಡಿಯ ಮೊದಲ ಚಿತ್ರ ಇದಾಗಿದ್ದು, ಹಿಮಾನ್ಶು ಶರ್ಮಾ ಚಿತ್ರಕಥೆ ಹೆಣೆದಿದ್ದಾರೆ. ಆನಂದ್ ಎಲ್ ರಾಯ್ ಮೊದಲ ಬಾರಿಗೆ ಕಿಂಗ್ ಖಾನ್‌ಗೆ ಆ್ಯಕ್ಶನ್ ಕಟ್ ಹೇಳಲಿದ್ದಾರೆ. "ಜಬ್ ತಕ್ ಹೈ ಜಾನ್" ಚಿತ್ರದಲ್ಲಿ ಶಾರುಖ್ ಜೊತೆಗೆ ನಟಿಸಿದ್ದ ಅನುಷ್ಕಾ ಮತ್ತು ಕತ್ರಿನಾ ಅವರೂ ಕೂಡಾ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
 
ಈ ಚಿತ್ರಕ್ಕೆ "ಝೀರೋ" ಎಂದು ಹೆಸರಿಡಲಾಗಿದ್ದು, ಈ ಚಿತ್ರ ಸಂಪೂರ್ಣ ಹಾಸ್ಯಮಯವಾಗಿರಲಿದೆ. ಶಾರುಖ್ ಖಾನ್ ಕುಳ್ಳನ ಪಾತ್ರದಲ್ಲಿ ನಟಿಸುತ್ತಿದ್ದರೆ, ಅನುಷ್ಕಾ ಬುದ್ಧಿಮಾಂದ್ಯರ ಪಾತ್ರದಲ್ಲಿ ಮತ್ತು ಕತ್ರಿನಾ ನಟಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಖ್ಯಾತನಾಮರಾದ ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ರಾಣಿ ಮುಖರ್ಜಿ, ಕಾಜೋಲ್, ಆಲಿಯಾ ಭಟ್, ಶ್ರೀದೇವಿ, ಕರೀಷ್ಮಾ ಕಪೂರ್ ಮತ್ತು ಜೂಹಿ ಚಾವ್ಲಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಇದೇ ವರ್ಷ ಡಿಸೆಂಬರ್ 21 ರಂದು ಅಭಿಮಾನಿಗಳಿಗೆ ಪರದೆ ಮೇಲೆ ಕಾಣಿಸಲಿದೆ.
 
ಭಾರತೀಯ ಸಿನೆಮಾ ಇತಿಹಾಸದಲ್ಲಿ ಚಿತ್ರವೊಂದರಲ್ಲಿ ಸಂಪೂರ್ಣವಾಗಿ ಕುಬ್ಜನ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿರುವ ಎರಡನೇ ನಟ ಶಾರುಖ್ ಎಂಬ ಖ್ಯಾತಿಯನ್ನು ಹೊಂದಲಿದ್ದಾರೆ. ಈ ಮೊದಲು ಕಮಲ್ ಹಾಸನ್ ಅವರು 1989 ರಲ್ಲಿ "ಅಪೂರ್ವ ಸಗೋದರರ್ಗಳ್" ಚಿತ್ರದಲ್ಲಿ ಕುಬ್ಜನ ಪಾತ್ರದಲ್ಲಿ ನಟಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವೀಕೆಂಡ್‌ನಲ್ಲಿ ಸ್ಪರ್ಧಿಗಳಿಗೆ ಬಿಗ್‌ ಶಾಕ್‌, ಸ್ಟ್ರಾಂಗ್ ಸ್ಪರ್ಧಿಯೇ ಮನೆಯಿಂದ ಔಟ್‌

ಪುಪ್ಪ–2 ಕಾಲ್ತುಳಿತ: ಅಲ್ಲು ಅರ್ಜುನ್ ಸೇರಿ 23ಮಂದಿ ವಿರುದ್ಧ ಜಾರ್ಜ್‌ಶೀಟ್

ಮನೆಮಂದಿಯನ್ನು ನೋಡಿ ಖುಷಿಯಲ್ಲಿದ್ದ ಬಿಗ್‌ಬಾಸ್‌ ಸ್ಪರ್ಧಿಗೆ ವೀಕೆಂಡ್‌ನಲ್ಲಿ ಬಿಗ್‌ ಶಾಕ್‌

ಇದಕ್ಕೆಲ್ಲ ಬುಡ ಯಾವುದೆಂದು ಹುಡುಕಬೇಕು, ವಿಜಯಲಕ್ಷ್ಮಿ ದೂರಿಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

ಗೆಳೆತಿ ತಾರಾ ಸುತಾರಿಗೆ ಲೈವ್‌ನಲ್ಲೇ ಕಿಸ್‌ ಕೊಟ್ಟ ಗಾಯಕ ಎಪಿ ಧಿಲ್ಲೋನ್‌, ಗೆಳೆಯ ವೀರ್ ಪಹಾರಿಯಾ ರಿಯ್ಯಾಕ್ಷನ್‌ ವೈರಲ್‌

ಮುಂದಿನ ಸುದ್ದಿ
Show comments