ಹೈದರಾಬಾದ್: ಜ್ಯೂ.ಎನ್ ಟಿಆರ್ ಈಗ ನ್ಯಾಷನಲ್ ಸ್ಟಾರ್ ಆಗಿದ್ದು, ಬಾಲಿವುಡ್ ಗೂ ಕಾಲಿಡುತ್ತಿದ್ದಾರೆ. ಆರ್ ಆರ್ ಆರ್ 3ಸಿನಿಮಾ ಬಳಿಕ ಅವರ ಬೇಡಿಕೆಯೂ ಹೆಚ್ಚಾಗಿದೆ.
ಆದರೆ ಇದಕ್ಕೆ ಮೊದಲು ಜ್ಯೂ.ಎನ್ ಟಿಆರ್ ಮಾಡಲ್ಲವೆಂದು ಬಿಟ್ಟಿದ್ದ ಸಿನಿಮಾಗಳು ಬೇರೆಯವರು ನಾಯಕರಾಗಿ ನಟಿಸಿ ಹಿಟ್ ಆದ ಉದಾಹರಣೆಗಳಿವೆ. ಅಂತಹ ಟಾಪ್ 3 ಸಿನಿಮಾಗಳು ಯಾವುವು ನೋಡೋಣ.
ಶ್ರೀಮಂತುಡು: ಈ ಸಿನಿಮಾವನ್ನು ಜ್ಯೂ.ಎನ್ ಟಿಆರ್ ಮಾಡಬೇಕಿತ್ತು. ಆದರೆ ತಿರಸ್ಕರಿಸಿದ್ದರಿಂದ ಮಹೇಶ್ ಬಾಬು ಪಾಲಾಯಿತು.
ಕಿಕ್: ಈ ಸಿನಿಮಾವನ್ನೂ ಜ್ಯೂ.ಎನ್ ಟಿಆರ್ ತಿರಸ್ಕರಿಸಿದ್ದರು. ಬಳಿಕ ರವಿ ತೇಜ ನಟಿಸಿ ಸಿನಿಮಾ ಸೂಪರ್ ಹಿಟ್ ಆಯ್ತು.
ಆರ್ಯ: ಅಲ್ಲು ಅರ್ಜುನ್ ನಾಯಕರಾಗಿ ಸೂಪರ್ ಹಿಟ್ ಆಗಿದ್ದ ಈ ಸಿನಿಮಾದ ಆಫರ್ ಮೊದಲು ಜ್ಯೂ.ಎನ್ ಟಿಆರ್ ಗೆ ಬಂದಿತ್ತು.