ಎರಡು ವಾರದಲ್ಲಿ ತಾನೂ ಗೆದ್ದು ಚಿತ್ರರಂಗವನ್ನು ಗೆಲ್ಲಿಸಿದ ಮೂರು ಸ್ಯಾಂಡಲ್ ವುಡ್ ಸಿನಿಮಾಗಳು

Webdunia
ಮಂಗಳವಾರ, 1 ಆಗಸ್ಟ್ 2023 (08:30 IST)
Photo Courtesy: Twitter
ಬೆಂಗಳೂರು: ಸ್ಟಾರ್ ನಟರ ಸಿನಿಮಾಗಳಿಲ್ಲದೇ, ಹಿಟ್ ಸಿನಿಮಾಗಳು ಬಾರದೇ ಕನ್ನಡ ಚಿತ್ರಮಂದಿರಗಳು ಸೊರಗಿ ಹೋಗಿದ್ದವು. ಆದರೆ ಈಗ ಸಿಕ್ಕ ಮೂರು ಸಿನಿಮಾಗಳ ಗೆಲುವು ಬೂಸ್ಟ್ ನೀಡಿದಂತಾಗಿದೆ.

ಎರಡು ವಾರದ ಮೊದಲು ಬಿಡುಗಡೆಯಾಗಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಬಹಳ ದಿನಗಳ ನಂತರ ಕನ್ನಡ ಚಿತ್ರರಂಗಕ್ಕೆ ಬೇಕಾಗಿದ್ದ ಬ್ರೇಕ್ ಕೊಟ್ಟಿತ್ತು. ಹೊಸಬರ ಸಿನಿಮಾವಾದರೂ ಪರಭಾಷಿಕರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಹೌಸ್ ಫುಲ್ ಪ್ರದರ್ಶನ ಕಂಡಿತ್ತು.

ಇದಾದ ಬಳಿಕ ಜುಲೈ 28 ಕ್ಕೆ ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ಕೌಸಲ್ಯ ಸುಪ್ರಜಾ ರಾಮ  ಮತ್ತು ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಣದ ಆಚಾರ್ ಆಂಡ್ ಕೋ. ಎನ್ನುವ ಎರಡು ಸಿನಿಮಾಗಳು ಬಿಡುಗಡೆಯಾಗಿದ್ದವು. ಎರಡೂ ಸಿನಿಮಾಗಳು ಒಟ್ಟಿಗೇ ಬಿಡುಗಡೆಯಾದಾಗ ಒಂದು ಕಳೆಗುಂದುತ್ತದೆ ಎನ್ನಲಾಗುತ್ತದೆ. ಆದರೆ ಅದನ್ನು ಈ ಎರಡೂ ಸಿನಿಮಾಗಳು ಹುಸಿಗೊಳಿಸಿವೆ. ಏಕಕಾಲಕ್ಕೆ ಬಿಡುಗಡೆಯಾದರೂ ಎರಡೂ ಸಿನಿಮಾಗಳೂ ಫ್ಯಾಮಿಲಿ ಪ್ರೇಕ್ಷಕರನ್ನು ಥಿಯೇಟರ್ ಗೆ ಕರೆದು ತರಲು ಯಶಸ್ವಿಯಾಗಿದೆ. ಆ ಮೂಲಕ ತಾನೂ ಗೆದ್ದು ಸ್ಯಾಂಡಲ್ ವುಡ್ ನ್ನು ಈ ಮೂರೂ ಸಿನಿಮಾಗಳೂ ಗೆಲ್ಲಿಸಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments