Webdunia - Bharat's app for daily news and videos

Install App

ಸ್ಯಾಂಡಲ್ ವುಡ್ ನಲ್ಲಿ ಇಂದು ಒಂದೇ ದಿನ ಮೂರು ಸಿನಿಮಾ ರಿಲೀಸ್

Webdunia
ಶುಕ್ರವಾರ, 24 ನವೆಂಬರ್ 2023 (09:00 IST)
ಬೆಂಗಳೂರು: ಒಂದೇ ದಿನ ಹಲವು ಸಿನಿಮಾಗಳು ರಿಲೀಸ್ ಆಗುವುದರಿಂದ ಪ್ರೇಕ್ಷಕ ಯಾವ ಸಿನಿಮಾ ನೋಡಬೇಕೆಂಬ ಗೊಂದಲಕ್ಕೆ ಬೀಳುತ್ತಾನೆ. ಕೊನೆಗೆ ಯಾವ ಸಿನಿಮಾವೂ ಗಳಿಕೆಯಲ್ಲಿ ಹೆಚ್ಚು ಸಾಧನೆ ಮಾಡುವುದಿಲ್ಲ.

ಇಂದೂ ಅದೇ ರೀತಿ ಆಗುತ್ತಿದೆ. ನವಂಬರ್ 24 ರಂದು ಬಹುಶಃ ಸ್ಯಾಂಡಲ್ ವುಡ್ ಸಿನಿಮಾಗಳಿಗೆ ಒಳ್ಳೆಯ ಮುಹೂರ್ತವೆನಿಸುತ್ತದೆ. ಇದೇ ಕಾರಣಕ್ಕೆ ಇಂದು ಒಟ್ಟು ಮೂರು ಪ್ರಮುಖ ಸಿನಿಮಾಗಳು ಬಿಡುಗಡೆಯಾಗಿವೆ.

ರಾಜ್ ಬಿ ಶೆಟ್ಟಿ ನಟಿಸಿರುವ, ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ಭಾವನಾತ್ಮಕ ರೊಮ್ಯಾಂಟಿಕ್ ಸಿನಿಮಾ ಇಂದು ಬಿಡುಗಡೆಯಾಗಿದೆ. ಮೊದಲಿಗೆ ಇದು ಒಟಿಟಿಯಲ್ಲಿ ಬಿಡುಗಡೆಯಾಗುವದೆಂದಿತ್ತು. ಆದರೆ ಇದೀಗ ಥಿಯೇಟರ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಇದಲ್ಲದೆ, ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಎಂಬ ಪಕ್ಕಾ ಮಾಸ್ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ದುನಿಯಾ ಸೂರಿ ನಿರ್ದೇಶನವಿದೆ. ಹೀಗಾಗಿ ಮಾಸ್ ಪ್ರೇಕ್ಷಕರಿಗೆ ಈ ಸಿನಿಮಾ ಖಂಡಿತಾ ಇಷ್ಟವಾಗುತ್ತದೆ.

ಇದಲ್ಲದೆ, ಫ್ಯಾಮಿಲಿ ಅಡಿಯನ್ಸ್ ಸೆಳೆಯುವ ಸಿನಿಮಾಗಳನ್ನು ಮಾಡಿಕೊಂಡು ಬಂದಿರುವ ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ಶುಗರ್ ಫ್ಯಾಕ್ಟರಿ ಇಂದು ಬಿಡುಗಡೆಯಾಗಿದೆ. ಇದರ ಜೊತೆಗೆ ಪರಭಾಷಾ ಸಿನಿಮಾಗಳಾದ ಆದಿಕೇಶವ (ತೆಲುಗು), ಬಿಲ್ಡಪ್ (ತಮಿಳು) ಕೂಡಾ ಇಂದೇ ಬಿಡುಗಡೆಯಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Amrithadhare serial: ಅಮೃತಧಾರೆಯಲ್ಲಿ ಮಹಾ ತಿರುವು, ಕನ್ನಡದಲ್ಲಿ ಅಪರೂಪಕ್ಕೆ ನಡೆಯುತ್ತಿದೆ ಇಂಥಾ ಟ್ವಿಸ್ಟ್

ಖ್ಯಾತ ಕಿರುತೆರೆ ನಟ ಆಶಿಶ್ ಕಪೂರ್ ಮೇಲೆ ಇದೆಂಥಾ ಆರೋಪ, ಜೈಲು ಸೇರುವ ಪರಿಸ್ಥಿತಿ ಹಾಕೆ ಬಂತು

ಜಿಎಸ್ ಟಿ ದರ ಕಡಿತವಾದ್ರೂ ಕನ್ನಡ ಸಿನಿಮಾ ವೀಕ್ಷಕರಿಗೆ ಲಾಭವಿಲ್ಲ

ನಾನು ಸ್ವಲ್ಪ ಸ್ಲೋ ಎನಿಸಬಹುದು ಆದ್ರೆ.. ರಕ್ಷಿತ್ ಶೆಟ್ಟಿ ಹೇಳಿದ ಮಾತು ನೋಡಿ video

₹69ಕೋಟಿ ವಂಚನೆ ಬೆನ್ನಲ್ಲೇ ನಟಿ ಶಿಲ್ಪಾ ಶೆಟ್ಟಿ ಮಾಲೀಕತ್ವದ ರೆಸ್ಟೋರೆಂಟ್‌ ಇದೇನಾಯಿತು

ಮುಂದಿನ ಸುದ್ದಿ
Show comments