Select Your Language

Notifications

webdunia
webdunia
webdunia
webdunia

ಕನ್ನಡದ ’ತಿಥಿ’ಗೆ ಮತ್ತೊಂದು ಅಪರೂಪದ ಗೌರವ

ಕನ್ನಡದ ’ತಿಥಿ’ಗೆ ಮತ್ತೊಂದು ಅಪರೂಪದ ಗೌರವ
Bangalore , ಮಂಗಳವಾರ, 21 ಫೆಬ್ರವರಿ 2017 (11:38 IST)
ಕನ್ನಡದ ’ತಿಥಿ’ ಚಿತ್ರ ಮತ್ತೊಂದು ಗೌರವಕ್ಕೆ ಪಾತ್ರವಾಗಿದೆ. ಚಿತ್ರದಲ್ಲಿ ಕಲಾವಿದರನ್ನೇ ಬಳಸಿಕೊಳ್ಳದೆ ಹಳ್ಳಿಯವರನ್ನೇ ಪಾತ್ರಗಳನ್ನಾಗಿ ಮಾಡಿ ರಾಮ್ ರೆಡ್ಡಿಯವರು ತೆರೆಗೆ ತಂದಿದ್ದರು. 101 ವರ್ಷದ ಸೆಂಚುರಿಗೌಡ ತೀರಿಕೊಂಡ ನಂತರ ಆತನ ಆಸ್ತಿ ಮಾರಾಟಕ್ಕಾಗಿ ನಡೆಯುವ ಕಥಾಹಂದರವನ್ನು ಅದ್ಭುತವಾಗಿ ತೆರೆಗೆ ತರಲಾಗಿದೆ. 
 
ಇದೀಗ ತಿಥಿ ಚಿತ್ರ 2016ರ ಭಾರತೀಯ ಅತ್ಯುತ್ತಮ ಚಿತ್ರ ಎಂದು ಫಿಲ್ಮಂ ಕ್ರಿಟಿಕ್ಸ್ ಸರ್ಕಲ್ ಆಫ್ ಇಂಡಿಯಾ ಪ್ರಮಾಣಪತ್ರ ನೀಡಿದೆ. ಚಿತ್ರ 2016ರಲ್ಲಿ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ ತಿಥಿ. ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಪ್ರದರ್ಶನ ಕಂಡಿದೆ.  
 
ಚೊಚ್ಚಲ ನಿರ್ದೇಶನದಲ್ಲೇ ಇಡೀ ದೇಶದ ಗಮನಸೆಳೆದ ರಾಮ್ ರೆಡ್ಡಿ ಹೊಸ ಚಿತ್ರವನ್ನು ಶೀಘ್ರದಲ್ಲೇ ಘೋಷಿಸುವುದಾಗಿ ಹೇಳಿದ್ದಾರೆ.  ಗಡ್ಡಪ್ಪ, ಸೆಂಚುರಿಗೌಡ ಸೇರಿದಂತೆ ಚಿತ್ರದ ಉಳಿದ ಪಾತ್ರಗಳು ಈಗ ಅದೇ ಹೆಸರಿನಲ್ಲಿ ಜನಪ್ರಿಯರಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಟ್ ಟಾಪಿಕ್‌ ಆಗಿ ಬದಲಾದ ಕೊಹ್ಲಿ ಲವರ್