ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಆದಿಪುರುಷ್ ಸಿನಿಮಾ ಬಿಡುಗಡೆಯಾಗಿ ಈಗ ಬಾಕ್ಸ್ ಆಫೀಸ್ ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ.
ಸಿನಿಮಾ ಬಗ್ಗೆ ಕಾಮೆಂಟ್ ಗಳು ಏನೇ ಇರಬಹುದು. ಆದರೆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಈ ಸಿನಿಮಾದ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ.
ಸಿನಿಮಾದಲ್ಲಿ ರಾವಣನ ಪಾತ್ರ ಮಾಡಿದ್ದು ಸೈಫ್ ಅಲಿ ಖಾನ್. ಆದರೆ ಅವರಿಗಿಂತ ಮೊದಲು ಮೂವರನ್ನು ಅಪ್ರೋಚ್ ಮಾಡಲಾಗಿತ್ತು. ಸಂಜಯ್ ದತ್, ರಣವೀರ್ ಸಿಂಗ್ ಮತ್ತು ಜ್ಯೂ.ಎನ್ ಟಿಆರ್ ಗೆ ಆಫರ್ ನೀಡಲಾಗಿತ್ತು. ಆದರೆ ಮೂವರೂ ನಾನಾ ಕಾರಣಗಳಿಂದ ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಕೊನೆಗೆ ಸೈಫ್ ಪಾಲಾಯಿತು.