Daily Horoscope
✕

‘ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದಲ್ಲಿ ಅಂಬಿ ಸ್ಟೈಲ್ ನೋಡಿ ಫಿದಾ ಆದ ಕನ್ನಡದ ನಟಿ ಯಾರು ಗೊತ್ತಾ?

Webdunia
ಶನಿವಾರ, 28 ಜುಲೈ 2018 (06:33 IST)
ಬೆಂಗಳೂರು : ಸುದೀಪ್ ಅವರ  ಬ್ಯಾನರ್ ನಲ್ಲಿ ತಯಾರಾಗಿರುವ "ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರೀಕರಣ ಮುಗಿದಿದ್ದು, ತೆರೆಗೆ ಬರಲು ಸಿದ್ದವಾಗಿದೆ. ಇದೀಗ ರಿಲೀಸ್‌ ಆಗಿರುವ ಈ ಚಿತ್ರದ ಪೋಸ್ಟರ್ ವೊಂದರಲ್ಲಿ ನಟ ಅಂಬರೀಶ್ ಅವರ  ಗೆಟಪ್‌ ಕಂಡು ಕನ್ನಡದ ನಟಿಯೊಬ್ಬರು ಫಿದಾ ಆಗಿದ್ದಾರೆ.


ಅವರು ಬೇರೆ ಯಾರು ಅಲ್ಲ. ನಟ ಅಂಬರೀಶ್ ಅವರ ಧರ್ಮಪತ್ನಿ ಸುಮಲತಾ ಅಂಬರೀಶ್. ಈ ಚಿತ್ರದ ಪೋಸ್ಟರ್ ನಲ್ಲಿ ಅಂಬರೀಶ್ ಅವರು ಜರ್ಕಿನ್‌ ತೊಟ್ಟು, ಹೆಲ್ಮೆಟ್‌ ಧರಿಸಿ, ಕಣ್ಣಿಗೆ ಕಪ್ಪು ಕನ್ನಡ ಹಾಕಿಕೊಂಡು ಬುಲ್ಲೆಟ್‌ ಬೈಕ್ನಲ್ಲಿ ಸವಾರಿ ಮಾಡುತ್ತಿದ್ದಾರೆ. ಈ ಲುಕ್ ಕಂಡು ಬೋಲ್ಡ್‌ ಆದ ನಟಿ ಸುಮಲತಾ ಅಂಬರೀಶ್ ಅವರು  “ಹಿಂದೆಂದೂ ನಾನು ಅವರನ್ನೂ ಈ ಲುಕ್‌ನಲ್ಲಿ ನೋಡಿಲ್ಲ. ಈ ಚಿತ್ರವನ್ನು ತೆರೆಯ ಮೇಲೆ ನೋಡಲು ತುಂಬಾ ಉತ್ಸುಕಳಾಗಿದ್ದೇನೆ’' ಎಂದು ಟ್ವೀಟ್ ಮಾಡುವುದರ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.


ಈ ಚಿತ್ರದಲ್ಲಿ ಅಂಬಿ ಅವರ ಯೌವ್ವನದ ಪಾತ್ರದಲ್ಲಿ ಕಿಚ್ಚ ಸುದೀಪ್‌ ಅವರು ನಟಿಸುತ್ತಿದ್ದಾರೆ. ಅಂಬರೀಶ್‌ ಜೋಡಿಯಾಗಿ ಸುಹಾಸಿನಿ ನಟಿಸುತ್ತಿದ್ದಾರೆ. ಈ ಚಿತ್ರ  ತಮಿಳಿನ "ಪಾ ಪಾಂಡಿ'’ ಚಿತ್ರದ ರೀಮೇಕ್‌. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ, ಜೆಬಿನ್‌ ಜಾಕೋಬ್‌ ಛಾಯಾಗ್ರಹಣ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಬಿಗ್ ಬಾಸ್ ಮನೆಯಿಂದ ಹೊರ ಬಂದ ತಕ್ಷಣ ಲಿಖಿತ್ ಜೊತೆ ಸೇರಿಕೊಂಡು ಮಂಜ ಮಾಡಿದ್ದೇನು: ವಿಡಿಯೋ ವೈರಲ್

BBK13: ನೀವು ಮದುವೆಯಾಗಿಲ್ಲಾಂದ್ರೆ ನಿಮ್ಮನ್ನೇ ಮದುವೆಯಾಗ್ತಿದ್ದೆ ಎಂದು ಸಂಗೀತಾ ಗಂಡನಿಗೆ ಹೇಳಿದ್ದರಂತೆ ಕಾವ್ಯಾ

ಚಿಲ್ಲರೆ ಬದಲಿಗೆ ಚಾಕಲೇಟ್ ನೀಡಿದಾಗ ನಾನಾ ಪಾಟೇಕರ್ ಏನು ಮಾಡಿದ್ರು: ಈ ಐಕಾನಿಕ್ ದೃಶ್ಯ ಈಗಲೂ ವೈರಲ್ Video

ನಟ ನಾನಾ ಪಾಟೇಕರ್ ಇನ್ನಿಲ್ಲ: ಹೃದಯಾಘಾತಕ್ಕೆ ಬಲಿಯಾಯ್ತು ಚಿತ್ರರಂಗದ ಮತ್ತೊಂದು ಪ್ರತಿಭೆ

ಚಿತ್ರದುರ್ಗದಲ್ಲಿ ಶಿವಣ್ಣನ ಎದುರೇ ಬ್ಲಾಸ್ಟ್ ಆದ ಪಟಾಕಿ: ಬೇಲ್ ಪ್ರಚಾರದ ವೇಳೆ ಕೂದಲೆಳೆ ಅಂತರದಲ್ಲಿ ಪಾರಾದ ನಟ

ಮುಂದಿನ ಸುದ್ದಿ
Show comments