ಎಷ್ಟೇ ದೊಡ್ಡ ಕಷ್ಟ ಎದುರಾದರೂ ಈ 5 ಸಂದರ್ಭಗಳಲ್ಲಿ ದೇವರ ನಾಮ ಸ್ಮರಿಸಬಾರದಂತೆ

ಶನಿವಾರ, 28 ಜುಲೈ 2018 (06:26 IST)
ಬೆಂಗಳೂರು : ತುಂಬ ಜನರಿಗೆ ದೇವರ ನಾಮವನ್ನು ಎಲ್ಲೆಂದರಲ್ಲಿ  ಸ್ಮರಿಸುವ ಅಭ್ಯಾಸವಿರುತ್ತದೆ. ದೇವರ ನಾಮ ಸ್ಮರಿಸುವುದು ಒಳ್ಳೆಯದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಅಥವಾ ಪ್ರದೇಶಗಳಲ್ಲಿ ದೇವರನಾಮ ಸ್ಮರಿಸಬಾರದು. ಇದರಿಂದ ನರಕ ಪ್ರಾಪ್ತಿಯಾಗುತ್ತದೆಯಂತೆ.


*ಕೆಲವರು ಸ್ನಾನದ ಕೋಣೆಯಲ್ಲಿ ದೇವರನಾಮ ಸ್ಮರಿಸುತ್ತಾರೆ ಅಥವಾ ದೇವರ ಗೀತೆಗಳನ್ನು ಹಾಡುತ್ತಾರೆ. ಹೀಗೆ ಮಾಡಬಾರದಂತೆ.

* ದಂಪತಿಗಳು ಅನೂನ್ಯವಾಗಿರುವ ವೇಳೆ ದೇವರನಾಮ ಸ್ಮರಿಸಬಾರದು. ಹೀಗೆ ಮಾಡಿದರೆ ಆ ದಂಪತಿಗಳ ನಡುವೆ ಕಲಹ ಉಂಟಾಗುತ್ತದೆಯಂತೆ.

* ಮಾಂಸಾಹಾರ ಸೇವಿಸುವಾಗ ದೇವರ ಬಗ್ಗೆ ಮಾತನಾಡಬಾರದು. ಇದರಿಂದ ಆರ್ಥಿಕ ಸಮಸ್ಯೆ ಎದುರಾಗುತ್ತದೆಯಂತೆ.

* ಹೆಚ್ಚಿನವರು ಆಕಳಿಸುವಾಗ ಹಾಗೂ ಸೀನುವಾಗ ದೇವರನಾಮ ಸ್ಮರಿಸುತ್ತಾರೆ. ಹೀಗೆ ಮಾಡಬಾರದಂತೆ.

*ಮಹಿಳೆಯರು ಋತು ಚಕ್ರ ಸಮಯದಲ್ಲಿ ದೇವರನಾಮ ಸ್ಮರಿಸಬಾರದು ಎಂದು ಶಾಸ್ತ್ರಗಳು ಹೇಳುತ್ತಿವೆ. ಒಂದು ವೇಳೆ ದೇವರನಾಮ ಸ್ಮರಿಸಿದರೆ ಮೋಕ್ಷಗಳಿಸಲು ಕಷ್ಟವಾಗುತ್ತದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ