ಕೆಜಿಎಫ್ ಹವಾ ನೋಡಿ ತಮಿಳು, ಮಲಯಾಳ, ತೆಲುಗು ಥಿಯೇಟರ್ ಮಾಲಿಕರ ನಿರ್ಧಾರವೇನು ಗೊತ್ತಾ?!

Webdunia
ಮಂಗಳವಾರ, 25 ಡಿಸೆಂಬರ್ 2018 (09:19 IST)
ಬೆಂಗಳೂರು: ಕನ್ನಡ ಸಿನಿಮಾವೊಂದು ದೇಶದಾದ್ಯಂತ ಈ ಮಟ್ಟಿಗೆ ಸದ್ದು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯೇ ಸರಿ. ಇದೀಗ ಕೆಜಿಎಫ್ ಹವಾ ನೋಡಿ ಬೇರೆ ರಾಜ್ಯಗಳ ಥಿಯೇಟರ್ ಮಾಲಿಕರು ಶೋ ಹೆಚ್ಚಿಸುವ ನಿರ್ಧಾರಕ್ಕೆ ಬಂದಿದ್ದಾರೆ.


ಸಾಮಾನ್ಯವಾಗಿ ಕನ್ನಡ ಚಿತ್ರವೊಂದನ್ನು ತಮ್ಮ ರಾಜ್ಯದಲ್ಲಿ ಶೋ ಏರ್ಪಡಿಸಲೇ ಹಿಂದೆ ಮುಂದೆ ನೋಡುವ ಥಿಯೇಟರ್ ಮಾಲಿಕರು ಕೆಜಿಎಫ್ ವಿಚಾರದಲ್ಲೂ ಆರಂಭದಲ್ಲಿ ಒಂದೋ ಎರಡೋ ಶೋ ಏರ್ಪಡಿಸುವ ನಿರ್ಧಾರ ಮಾಡಿದ್ದರು.

ಆದರೆ ಈಗ ಕೆಜಿಎಫ್ ಬಗ್ಗೆ ಜನರಲ್ಲಿ ಕ್ರೇಜ್ ಹೆಚ್ಚುತ್ತಿರುವುದು ನೋಡಿ ಶೋ ಸಂಖ್ಯೆ ಹೆಚ್ಚಿಸಲು ಸಜ್ಜಾಗಿದ್ದಾರೆ. ಕೆಜಿಎಫ್ ಈಗಾಗಲೇ 70 ಕೋಟಿ ರೂ. ಗೂ ಅಧಿಕ ಗಳಿಕೆ ಮಾಡಿದ್ದು, ಈ ವರ್ಷದ ಬ್ಲಾಕ್ ಬ್ಲಸ್ಟರ್ ಸಿನಿಮಾ ಆಗಿದೆ. ಇನ್ನು ಬುಕ್ ಮೈ ಶೋನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದಕ್ಕೆ ಅತ್ಯಧಿಕ ಲೈಕ್ ಸಿಕ್ಕಿದೆ. ವಾರದ ಮೊದಲ ದಿನವಾದ ನಿನ್ನೆಯೂ ಥಿಯೇಟರ್ ತುಂಬಿ ತುಳುಕಿದ್ದು ಕೆಜಿಎಫ್ ಹೆಗ್ಗಳಿಕೆಯೇ ಸರಿ.

ತಮಿಳುನಾಡಿನಲ್ಲಿ ಈಗಾಗಲೇ ಸ್ಕ್ರೀನಿಂಗ್ ತ್ರಿಬಲ್ ಆಗಿದ್ದರೆ, ಮಲಯಾಳಂನಲ್ಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಥಿಯೇಟರ್ ಮಾಲಿಕರೊಬ್ಬರು ತಾವಾಗಿಯೇ ಶೋ ಹೆಚ್ಚಿಸಲು ನಿರ್ಧರಿಸಿದ್ದಾರೆ. ಬಾಹುಬಲಿ ಸಿನಿಮಾ ನಂತರ ದ.ಭಾರತದ ಸಿನಿಮಾವೊಂದು ಈ ಮಟ್ಟಿಗೆ ಬಾಲಿವುಡ್ ಸಿನಿಮಾಗೂ ಸೆಡ್ಡು ಹೊಡೆದಿದ್ದು ಇದೇ ಮೊದಲ ಬಾರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಣಬೀರ್ ಕಪೂರ್ ದೈವದ ಅಪಹಾಸ್ಯ ಮಾಡುತ್ತಿದ್ದಾಗ ಸುಮ್ಮನಿದ್ರಾ ರಿಷಬ್ ಶೆಟ್ಟಿ: ಅಸಲಿ ವಿಡಿಯೋ ಇಲ್ಲಿದೆ

ರಣವೀರ್ ಸಿಂಗ್ ದೈವವನ್ನು ಅನುಕರಿಸಿ, ದೆವ್ವ ಎಂದರೂ ನಗುತ್ತಲೇ ಕೂತಾ ರಿಷಬ್ ಶೆಟ್ಟಿ, ಭಾರೀ ಆಕ್ರೋಶ

ಕಳೆದ ಸೀಸನ್‌ನಲ್ಲಿ ಧೂಳೇಬ್ಬಿಸಿದ ಈ ಜೋಡಿ , ಇನ್ಮುಂದೆ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

ಖ್ಯಾತ ಹಾಸ್ಯ ಕಲಾವಿದ ಉಮೇಶ್‌ ಇನ್ನಿಲ್ಲ, ಕಲಾ ಬದುಕಿಗೆ ಎಂಟ್ರಿ ಕೊಟ್ಟಿದೆ ರೋಚಕ

ನಿಮಗೂ ರೆಸ್ಟೋರೆಂಟ್‌ನಲ್ಲಿ ಹೀಗೇ ನಡೆಸಿಕೊಂಡರೆ ಒಕೆ ನಾ, ಗಿಲ್ಲಿಗೆ ಕಿಚ್ಚ ಸುದೀಪ್ ಪ್ರಶ್ನೆ

ಮುಂದಿನ ಸುದ್ದಿ
Show comments