Select Your Language

Notifications

webdunia
webdunia
webdunia
webdunia

ಹಸೆಮಣೆ ಏರುವ ಸಂಭ್ರಮದಲ್ಲಿರುವ ಧ್ರುವ ಸರ್ಜಾಗೆ ಹುಡುಗಿಯರಿಂದ ಬೆದರಿಕೆ

ಹಸೆಮಣೆ ಏರುವ ಸಂಭ್ರಮದಲ್ಲಿರುವ ಧ್ರುವ ಸರ್ಜಾಗೆ ಹುಡುಗಿಯರಿಂದ ಬೆದರಿಕೆ
ಬೆಂಗಳೂರು , ಮಂಗಳವಾರ, 20 ನವೆಂಬರ್ 2018 (09:47 IST)
ಬೆಂಗಳೂರು : ಹಸೆಮಣೆ ಏರುವ ಸಂಭ್ರಮದಲ್ಲಿರುವ ಸ್ಯಾಂಡಲ್ ವುಡ್ ನ ಆ್ಯಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಅವರಿಗೆ ಹುಡುಗಿಯರಿಂದ ಬೆದರಿಕೆಯ ಕರೆಗಳು ಬರುತ್ತಿದೆಯಂತೆ.


ಹೌದು. ನಟ ಧ್ರುವ ಸರ್ಜಾ ಅವರು ತಮ್ಮ ಬರ್ತ್ ಡೇಯಂದು ತಾನು ಲವ್ ಮ್ಯಾರೇಜ್ ಆಗುವುದಾಗಿ ತಿಳಿಸಿದ್ದರು. ನಂತರ ಅದರ  ಬೆನ್ನಲ್ಲೇ ಮದುವೆಯಾಗುವ ಹುಡುಗಿಯ ಫೋಟೋ ಕೂಡ ರಿವೀಲ್ ಮಾಡಿದರು. ಆದರೆ ಇತ್ತೀಚೆಗೆ ಧ್ರುವ ಸರ್ಜಾ ತಮ್ಮ ಗೆಳತಿ ಪ್ರೇರಣಾ ಜೊತೆ ಮುಂದಿನ ತಿಂಗಳು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ.  


ಇದೀಗ ಈ ವಿಚಾರ ತಿಳಿಯುತ್ತಿದ್ದಂತೆ ಧ್ರುವಾಗೆ ಅನಾಮಧೇಯ ಹುಡುಗಿಯರ ಕರೆ ಬರೋಕೆ ಶುರುವಾಗಿದೆಯಂತೆ. ಕೆಲ ಹುಡುಗಿಯರು ಧ್ರುವ ಸ್ನೇಹಿತರಿಗೆ, ಇನ್ನೂ ಕೆಲವರು ಧ್ರುವಾಗೇ ಕರೆ ಮಾಡಿ ಮದುವೆಯಾದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ, ನಾನೂ ನಿಮ್ಮನ್ನ ತುಂಬಾ ಪ್ರೀತಿಸುತ್ತೇನೆ ನನ್ನನ್ನೇ ಮದುವೆಯಾಗು ಅಂತ ಹೇಳಿದ್ದಾರೆ. ಇನ್ನೂ ಕೆಲವರು ನೀವು ಮದುವೆಯಾದರೆ ಮನೆ ಮುಂದೆ ಬಂದು ಧರಣಿ ಕೂರುತ್ತೇವೆ ಅಂತ ಬೆದರಿಕೆ ಒಡ್ಡುತ್ತಿದ್ದಾರೆ ಎನ್ನಲಾಗಿದೆ.  

      
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಪ್ರಿಯಾಂಕಾ ಚೋಪ್ರಾ ಭಾವೀ ಪತಿ ನಿಕ್ ಜೊನಾಸ್ ಗೆ ಇದೆ ಈ ಖಾಯಿಲೆ!