Select Your Language

Notifications

webdunia
webdunia
webdunia
webdunia

ಕಾಜಲ್ ಅಗರವಾಲ್ ಗೆ ಮದುವೆಗೆ ಮೊದಲೇ ಭಯ ಹುಟ್ಟಿಸುತ್ತಿದೆಯಂತೆ ಈ ಪಾತ್ರ

ಕಾಜಲ್ ಅಗರವಾಲ್ ಗೆ ಮದುವೆಗೆ ಮೊದಲೇ ಭಯ ಹುಟ್ಟಿಸುತ್ತಿದೆಯಂತೆ ಈ ಪಾತ್ರ
ಹೈದರಾಬಾದ್ , ಸೋಮವಾರ, 26 ಅಕ್ಟೋಬರ್ 2020 (07:55 IST)
ಹೈದರಾಬಾದ್ : ಇತ್ತೀಚೆಗೆ ವೆಬ್ ಸರಣಿಗಳು ಹೆಚ್ಚಾಗುತ್ತಿದ್ದು, ಹೆಚ್ಚಿನ ನಟಿಮಣಿಯರು ವೆಬ್ ಸರಣಿಯ ಕಡೆಗೆ ಮುಖ ಮಾಡಿದ್ದಾರೆ. ಅವರಲ್ಲಿ ನಟಿ ಕಾಜಲ್ ಅಗರವಾಲ್ ಕೂಡ ಒಬ್ಬರು.

ಕಾಜಲ್ ವೆಬ್ ಸರಣಿಯಲ್ಲಿ ನಟಿಸಲು ಸಜ್ಜಾಗಿದ್ದು, ಅದರಲ್ಲಿ ದೆವ್ವದ ಪಾತ್ರದಲ್ಲಿ ನಟಿಸಿ ವೀಕ್ಷಕರನ್ನು ಹೆದರಿಸಲಿದ್ದಾರಂತೆ. ಕಾಜಲ್ ಹಿಂದೆಂದೂ ಮಾಡದ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದ್ದು, ಅದನ್ನು ನೋಡಿದರೆ ಅಕ್ಟೋಬರ್ 30ರಂದು ಗೌತಮ್ ಜೊತೆ ಮದುವೆಗೆ ಮೊದಲೇ ಈ ಪಾತ್ರ ನನ್ನನ್ನು ಹೆದರಿಸುತ್ತಿದೆ ಎಂದು ಕಾಜಲ್ ಹೇಳಿದ್ದಾರೆ.

ಈ ವೆಬ್ ಸರಣಿಯ ಶೀರ್ಷಿಕೆ ‘ಲೈವ್ ಟೆಲಿಕಾಸ್ಟ್’ ಆಗಿದ್ದು, ಇದರಲ್ಲಿ ಮೊದಲ ನೋಟಕ್ಕೆ ಕಾಜಲ್ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ತಮಿಳು ನಿರ್ದೇಶಕ ವೆಂಕಟ್ ಪ್ರಭು ನಿರ್ದೇಶನದ ಈ ವೆಬ್ ಸರಣಿಯಲ್ಲಿ ಒಟ್ಟು 7 ಸಂಚಿಕೆಗಳಿರಲಿದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದಲ್ಲಿ ಧ್ವನಿ ನೀಡಿದ್ದೇನೆ ಎಂಬುದೇ ನನಗೆ ಹೆಮ್ಮೆ: ಜಗಪತಿಬಾಬು