ಕೇರಳಕ್ಕೆ ಶೂಟಿಂಗ್ ಗೆ ಬಂದ ದಳಪತಿ ವಿಜಯ್ ಕಾರು ಜಖಂ

Krishnaveni K
ಮಂಗಳವಾರ, 19 ಮಾರ್ಚ್ 2024 (12:38 IST)
ತಿರುವನಂತಪುರಂ: 14 ವರ್ಷಗಳ ಬಳಿಕ ದಳಪತಿ ವಿಜಯ್ ಸಿನಿಮಾ ಶೂಟಿಂಗ್ ಗಾಗಿ ದೇವರ ನಾಡು ಕೇರಳಕ್ಕೆ ಬಂದಿದ್ದಾರೆ. ಆಧರೆ ಬಂದ ದಿನವೇ ಅವರಿಗೆ ಶಾಕ್ ಆಗಿದೆ.

ದಳಪತಿ ವಿಜಯ್ ಕಾರನ್ನು ಅಭಿಮಾನಿಗಳು ಜಖಂಗೊಳಿಸಿದ್ದಾರೆ. ವಿಜಯ್ ಉಳಿದುಕೊಂಡಿದ್ದ ಹೋಟೆಲ್ ಬಳಿ ನಿಲ್ಲಿಸಿದ್ದ ಕಾರಿನ ಗಾಜು ಪುಡಿ ಪುಡಿಯಾಗಿದ್ದಲ್ಲದೆ, ಕಾರಿಗೂ ಹಾನಿ ಮಾಡಲಾಗಿದೆ. ಬಹಳ ಸಮಯದ ನಂತರ ವಿಜಯ್ ನನ್ನು ಕೇರಳದಲ್ಲಿ ನೋಡಿದ ಅಭಿಮಾನಿಗಳು ಈ ರೀತಿ ಅತಿರೇಕದ ವರ್ತನೆ ತೋರಿದ್ದಾರೆ.

ದಳಪತಿ ವಿಜಯ್ ಇದೀಗ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಸಿನಿಮಾದ ಚಿತ್ರೀಕರಣಕ್ಕಾಗಿ ವಿಜಯ್ ತಿರುವನಂತಪುರಂಗೆ ಬಂದಿದ್ದಾರೆ. ಅವರನ್ನು ಏರ್ ಪೋರ್ಟ್ ನಲ್ಲಿಯೇ ಜನ ಅದ್ಧೂರಿಯಾಗಿ ಸ್ವಾಗತಿಸಿದ್ದರು.

ಇದು ಇಷ್ಟಕ್ಕೇ ನಿಲ್ಲಲಿಲ್ಲ. ಅವರು ಉಳಿದುಕೊಂಡಿದ್ದ ಹೋಟೆಲ್ ಬಳಿಯೂ ಜನ ಜಮಾಯಿಸಿದ್ದರು. ವಿಶೇಷವೆಂದರೆ ವಿಜಯ್ 14 ವರ್ಷಗಳ ಬಳಿಕ ಕೇರಳಕ್ಕೆ ಆಗಮಿಸುತ್ತಿದ್ದಾರೆ. ಇಲ್ಲಿ ಅವರಿಗೆ ಅನೇಕ ಅಭಿಮಾನಿ ಬಳಗವಿದೆ. ಅವರಿಂದ ತಮ್ಮ ಮೆಚ್ಚಿನ ನಟನನ್ನು ಕಂಡ ಖುಷಿಯಲ್ಲಿ ಇಂತಹ ಮಿತಿ ಮೀರಿದ ವರ್ತನೆ ಕಂಡುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪಂಜುರ್ಲಿ ದೈವಕ್ಕೆ ಹರಕೆ ತೀರಿಸಿದ ರಿಷಬ್ ಶೆಟ್ಟಿ: ದೈವ ಹೇಳಿದ್ದು ಏನು

ನಟ ಶಾರುಖ್‌ಖಾನ್ ಪುತ್ರನ ಇದೆಂಥಾ ದುರ್ವರ್ತನೆ, ವಿಡಿಯೋ ವೈರಲ್

ಸಮಂತಾ ಮದುವೆ ಬೆನ್ನಲ್ಲೇ ನಾಗಚೈತನ್ಯ ಜತೆಗಿನ ವಿಶೇಷ ಕ್ಷಣದ ವಿಡಿಯೋ ಹಂಚಿಕೊಂಡ ಶೋಭಿತಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ಮುಂದಿನ ಸುದ್ದಿ
Show comments