Webdunia - Bharat's app for daily news and videos

Install App

ಐಟಂ ಸಾಂಗ್‌ನ ರಿಹರ್ಸಲ್ ವಿಡಿಯೋ ಹಂಚಿದ 'ಕಾವಾಲಯ್ಯ'ನಟಿ: ಬೆಂಕಿ ಎಂದಾ ನೆಟ್ಟಿಗರು

Sampriya
ಭಾನುವಾರ, 28 ಜುಲೈ 2024 (15:16 IST)
Photo Courtesy X
ಬಾಲಿವುಡ್‌ ಬಹುನಿರೀಕ್ಷಿತ ಕಾಮಿಡಿ-ಹಾರರ್ ಕಥಾ ಹಂದರವುಳ್ಳ ಸಿನಿಮಾ 'ಸ್ತ್ರೀ 2' ನಿಂದ ತಮನ್ನಾ ಭಾಟಿಯಾ ಹೆಜ್ಜೆ ಹಾಕಿರುವ ಹಾಡು ಈಗಾಗಲೇ ಭಾರೀ ಸದ್ದು ಮಾಡುತ್ತಿದೆ.  

ಸಚಿನ್-ಜಿಗರ್ ಸಂಯೋಜಿಸಿದ ಮತ್ತು ತಮನ್ನಾ ಭಾಟಿಯಾ ಡ್ಯಾನ್ಸ್ ಮಾಡಿರುವ ಮೊದಲ ಹಾಡು 'ಆಜ್ ಕಿ ರಾತ್' ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಗೂಗಲ್‌ನಲ್ಲಿ ಟ್ರೆಂಡಿಗ್‌ನಲ್ಲಿದೆ.  ಇನ್ನೂ ಮಿಲ್ಕ್ ಬ್ಯೂಟಿ ತಮನ್ನಾ ಭಾಟಿಯಾ ಅವರ ಹಾಟ್ ಮೈಮಾಟದಲ್ಲಿ ಸಖತ್ ಗ್ಲಾಮರಸ್‌ ಆಗಿ ನೃತ್ಯ ಮಾಡಿದ್ದಾರೆ.

ಇನ್ನೂ ತಮನ್ನಾ ಅವರ ನೃತ್ಯಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಫಿದಾ ಆಗಿ ಹಾಡಿ ಹೊಗಳಿದ್ದಾರೆ. ಇದೀಗ ತಮನ್ನಾ ಅವರು ಆ ಹಾಡಿನ ನೃತ್ಯದ ಅಭ್ಯಾಸದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.  ಶುಕ್ರವಾರ ವೈರಲ್ ಡ್ಯಾನ್ಸ್ ಸ್ಟೆಪ್‌ಗಳ ಟ್ಯುಟೋರಿಯಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ತಮನ್ನಾ ಭಾಟಿಯಾ ಅವರ ಮೇಲೆ ಹಾಡನ್ನು ಚಿತ್ರಿಸಲಾಗಿದೆ. ಈಚೆಗೆ ಆಕೆಯ ಅಭ್ಯಾಸದ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚಿಕ್ ಬ್ಲ್ಯಾಕ್ ಕೋ-ಆರ್ಡ್ ಸೆಟ್‌ನಲ್ಲಿ ಧರಿಸಿರುವ ಅವರು ಇತ್ತೀಚೆಗೆ ತಮ್ಮ ಅಭಿಮಾನಿಗಳಿಗೆ ತನ್ನ ಅಭ್ಯಾಸದ ಕ್ಷಣಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಅವರು ಕೊರಿಯೋಗ್ರಾಫರ್‌ಗಳೊಂದಿಗೆ ಹೆಜ್ಜೆಯನ್ನು ಅಭ್ಯಾಸ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯು, "ಆಜ್ ಕಿ ರಾತ್ ಮೇಲಿನ ಎಲ್ಲಾ ಪ್ರೀತಿಗೆ ಧನ್ಯವಾದಗಳು. ನೀವೆಲ್ಲರೂ ನನ್ನನ್ನು ಹೇಗೆ ಹೆಜ್ಜೆ  ಹಾಕಿದ್ದೀರಿ ಎಂದು ಕೇಳಿದ್ದೀರಿ. ಹಾಗಾಗಿ ಅದು ಇಲ್ಲಿದೆ. @vijayganguly ತಬಾಹಿ ಪಕ್ಕಿ ಹೈ ಎಂದು ಖಚಿತಪಡಿಸಿಕೊಂಡರು. ಮತ್ತು ಈಗ ನಾನು ನಿಮ್ಮನ್ನು ನೋಡಲು ಕಾಯಲು ಸಾಧ್ಯವಿಲ್ಲ ಎಲ್ಲರೂ ಇದನ್ನು ರೀಲ್‌ಗಳಲ್ಲಿ ಮರುಸೃಷ್ಟಿಸಿ ಎಂದು ಬರೆದುಕೊಂಡಿದ್ದಾರೆ."

ತಮನ್ನಾ ಅವರ ನೃತ್ಯ ಕೌಶಲ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಕಿರುತೆರೆ ನಟಿ ಶ್ವೇತಾ ತಿವಾರಿ, "ನೀನು ಕೊಂದಿದ್ದೀಯಾ..!"

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಈ ಒಬ್ಬ ವ್ಯಕ್ತಿಯನ್ನು ನೆಪ ಮಾಡಿ ಜಾಮೀನು ರದ್ದು ಮಾಡಬೇಡಿ ಎನ್ನುತ್ತಿರುವ ಪವಿತ್ರಾ ಗೌಡ

ಅಬ್ಬಬ್ಬಾ ಏನಿದೂ ದೀಪಿಕಾ ಪಡುಕೋಣೆ ಹವಾ: ಇನ್‌ಸ್ಟಾಗ್ರಾಂನಲ್ಲಿ ರೊನಾಲ್ಡೊ, ಪಾಂಡ್ಯರನ್ನೇ ಮೀರಿಸಿದ ಕನ್ನಡತಿ

ಡಿವೋರ್ಸ್ ವದಂತಿ ಬೆನ್ನಲ್ಲೇ ಹನ್ಸಿಕಾ ಇನ್‌ಸ್ಟಾಗ್ರಾಂನಲ್ಲಿ ಭಾರೀ ಬದಲಾವಣೆ

ಸ್ಯಾಂಡಲ್ ವುಡ್ ಯುವ ನಟ ಸಂತೋಷ್ ಬಾಲರಾಜ್ ನಿಧನ

ಶೆಟ್ಟಿ ಗ್ಯಾಂಗ್ ಎಂದವರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು ಗೊತ್ತಾ

ಮುಂದಿನ ಸುದ್ದಿ