Select Your Language

Notifications

webdunia
webdunia
webdunia
webdunia

ಬಿಡುಗಡೆಗೂ ಮುನ್ನವೇ ರೂ.100 ಕೋಟಿ ಬಿಜಿನೆಸ್

ಬಿಡುಗಡೆಗೂ ಮುನ್ನವೇ ರೂ.100 ಕೋಟಿ ಬಿಜಿನೆಸ್
Chennai , ಮಂಗಳವಾರ, 31 ಜನವರಿ 2017 (12:11 IST)
ತಮಿಳು ನಟ ಸೂರ್ಯ ಮುಖ್ಯಭೂಮಿಕೆಯಲ್ಲಿರುವ ’ಎಸ್ 3’ (ಸಿಂಗಂ 3) ಚಿತ್ರ ಇದೇ ಫೆಬ್ರವರಿ 9ಕ್ಕೆ ಚಿತ್ರಮಂದಿರಗಳಿಗೆ ಬರುತ್ತಿದೆ. ಆದರೆ ಈ ಚಿತ್ರ ಬಿಡುಗಡೆಗೂ ಮುನ್ನವೇ ದಾಖಲೆ ಸೃಷ್ಟಿಸಿದೆ. ವಿತರಣೆ ಹಕ್ಕು, ಟಿವಿ ಸ್ಯಾಟಲೈಟ್ ರೈಟ್ಸ್ ಮೂಲಕ ರೂ.100 ಕೋಟಿ ಗಳಿಸಿದೆ.
 
ಸೂಪರ್ ಸ್ಟಾರ್ ರಜನಿಕಾಂತ್ ಬಳಿಕ ಆ ಮಟ್ಟದಲ್ಲಿ ಪ್ರಿ-ರಿಲೀಸ್ ಬಿಜಿನೆಸ್ ಮಾಡಿದ ಚಿತ್ರ ನಟ ಸೂರ್ಯ ಅವರದೇ ಎಂದು ನಿರ್ಮಾಪಕ ಜ್ಞಾನವೇಲು ತಿಳಿಸಿದ್ದಾರೆ. ಸಿಗಂ ಹೆಸರಿನಲ್ಲಿ ಈಗಾಗಲೆ ಎರಡು ಭಾಗಗಳು ಬಂದಿದ್ದು ಇದು ಮೂರನೇ ಭಾಗವಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕ ಹರಿ.
 
ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಒಬ್ಬರು ಅನುಷ್ಕಾ ಮತ್ತೊಬ್ಬರು ಶ್ರುತಿ ಹಾಸನ್. ಈ ಚಿತ್ರಕ್ಕೆ ಹ್ಯಾರೀಸ್ ಜಯರಾಜ್ ಸಂಗೀತ ಇದೆ. ಸೂರ್ಯ ಚಿತ್ರಗಳೆಂದರೆ ಅಭಿಮಾನಿಗಳಿಗೇನು ಬರವಿಲ್ಲ. ಅದರಲ್ಲೂ ಇದು ಪೊಲೀಸ್ ಸ್ಟೋರಿ. ಹಾಗಾಗಿ ನಿರೀಕ್ಷೆಗಳು ಸಾಕಷ್ಟಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ 2 ಪೋಸ್ಟರ್ ನಲ್ಲಿ ತಪ್ಪು ಹುಡುಕಿದ ನೆಟ್ಟಿಗರು!