Webdunia - Bharat's app for daily news and videos

Install App

ತಮ್ಮ ಚೊಚ್ಚಲ ಬಾಲಿವುಡ್ ಸಿನಿಮಾದ ಬಿಗ್‌ ಅಪ್‌ಡೇಟ್‌ ನೀಡಿದ ಮಹಾನಟಿ ಕೀರ್ತಿ ಸುರೇಶ್

Sampriya
ಶನಿವಾರ, 23 ನವೆಂಬರ್ 2024 (18:29 IST)
Photo Courtesy X
ಮುಂಬೈ: ತಮ್ಮ ಮೊದಲ ಹಿಂದಿ ಸಿನಿಮಾಗಾಗಿ ಕಾಯುತ್ತಿದ್ದ ಫ್ಯಾನ್ಸ್‌ಗೆ ಮಹಾನಟಿ ಕೀರ್ತಿ ಸುರೇಶ್‌ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಸೌತ್‌ ಇಂಡಿಯಾ ಬ್ಯೂಟಿ ಕೀರ್ತಿ ಸುರೇಶ್ ಅವರು ವರುಣ್ ಧವನ್‌ಗೆ ಜೋಡಿಯಾಗೋ ಮೂಲಕ ಬಾಲಿವುಡ್‌ಗೆಎಂಟ್ರಿ ಕೊಟ್ಟಿದ್ದಾರೆ.  ಬೇಬಿ ಜಾನ್ ಸಿನಿಮಾದ ಫಸ್ಟ್‌ ಸಾಂಗ್ ರಿಲೀಸ್ ಕುರಿತು ನಟಿ ಮಾಹಿತಿ ನೀಡಿದ್ದಾರೆ.

ವರುಣ್ ಧವನ್ ಜೊತೆ ಕೀರ್ತಿ ಡ್ಯಾನ್ಸ್ ಮಾಡಿರುವ ಚಿತ್ರದ ಮೊದಲ ಸಾಂಗ್ ಅನ್ನು ಇದೇ ನ.25ಕ್ಕೆ ರಿಲೀಸ್ ಮಾಡೋದಾಗಿ ನಟಿ ಮಾಹಿತಿ ಹಂಚಿಕೊಂಡಿದ್ದಾರೆ. ಅದಕ್ಕೂ ಮುನ್ನ ಸಾಂಗ್‌ನ ಸಣ್ಣ ಪ್ರೋಮೋವೊಂದನ್ನು ನಟಿ ಶೇರ್ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳಲ್ಲಿ ಈ ಸಿನಿಮಾದ ಸಾಂಗ್‌ ಬಗ್ಗೆ ಕ್ರೇಜ್ ಹೆಚ್ಚಾಗಿದೆ.

ವರುಣ್ ಜೊತೆ ಕೀರ್ತಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಡಿನ ಮ್ಯೂಸಿಕ್ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಫುಲ್ ಸಾಂಗ್ ನೋಡಲು ಕಾತರದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಚಿತ್ರವನ್ನು ಜವಾನ್ ನಿರ್ದೇಶಕ ಅಟ್ಲಿ ನಿರ್ದೇಶನ ಮಾಡಿದ್ದಾರೆ.

ಸಿನಿಮಾದಲ್ಲಿ ವರುಣ್ ಧವನ್ ಪವರ್‌ಫುಲ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅಟ್ಲಿ ನಿರ್ದೇಶನ ಮಾಡಿದ್ದ ತಮಿಳಿನ ತೇರಿ ಚಿತ್ರದ ಕಥೆಯನ್ನೇ ಬಾಲಿವುಡ್‌ನಲ್ಲಿ ತೋರಿಸಲು ರೆಡಿಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

ಕೋಟ್ಯಂತರ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣ: ನಿರ್ಮಾಪಕ ಅಲ್ಲು ಅರವಿಂದ್‌ಗೆ ಜಾರಿ ನಿರ್ದೇಶನಾಲಯ ಶಾಕ್‌

ಮಕ್ಕಳಾಗೋದಿಕ್ಕೆ ಮದುವೆಯೇ ಆಗ್ಬೇಕಾ: ನಟಿ ಭಾವನಾ ರಾಮಣ್ಣ ಪ್ರಶ್ನೆ

ಮುಂದಿನ ಸುದ್ದಿ
Show comments