ಕಾಂತಾರ ಸಿನಿಮಾ ಟ್ರೈಲರ್ ಲಾಂಚ್‌ಗೆ ಒಂಗೂಡಲಿದೆ ನಾನಾ ಭಾಷೆಯ ಸೂಪರ್ ಸ್ಟಾರ್ಸ್‌ಗಳು

Sampriya
ಶನಿವಾರ, 20 ಸೆಪ್ಟಂಬರ್ 2025 (18:43 IST)
Photo Credit X
ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ಕಾಂತಾರ ಅಧ್ಯಾಯ 1 ಟ್ರೇಲರ್‌ ಅನ್ನು ಇದೇ ತಿಂಗಳ 22ರಂದು ನಾನಾ ಭಾಷೆಯ ಸೂಪರ್ ಸ್ಟಾರ್ಸ್‌ಗಳು ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ಸಿನಿಮಾಗೆ ಎಲ್ಲ ರಂಗದ ಸೂಪರ್ ಸ್ಟಾರ್‌ಗಳಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. 

ಹಿಂದಿಯಲ್ಲಿ ನಟ ಹೃತಿಕ್ ರೋಷನ್, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್, ತಮಿಳಿನಲ್ಲಿ ಶಿವಕಾರ್ತಿಕೇಯನ್ ಅವರು ಟ್ರೈಲರನ್ನು ಅನಾವರಣಗೊಳಿಸಲಿದ್ದಾರೆ.

ಈ ಹಿಂದೆ ಮೊದಲು ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮತ್ತೇ ಬಿಡುಗಡೆ ಮಾಡಲಾಯಿತು. ಈ ಸಿನಿಮಾ ನಿರೀಕ್ಷೆಗೂ ಮೀರಿ ದೊಡ್ಡ ಯಶಸ್ಸನ್ನು ಕಂಡಿತ್ತು. ನಟಿ ಸಪ್ತಮಿ ಗೌಡ, ರಿಷಬ್ ಶೆಟ್ಟಿ , ಕಿಶೋರ್, ಅಚ್ಯುತ್ ಕುಮಾರ್ ಸೇರಿಂದತೆ ಅನೇಕರು ಬಣ್ಣ ಹಚ್ಚಿದ್ದರು.

ಇದೀಗ ಪೌರಣಿಕ ಕಥೆ ಆಧಾರಿತ ‘ಕಾಂತಾರ ಅಧ್ಯಾಯ1’ಚಿತ್ರದಲ್ಲೂ ರಿಷಭ್ ಶೆಟ್ಟಿ ಅಭಿನಯಿಸಿ, ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾಗೆ ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. 

'ಈ ಚಿತ್ರವು ಅಕ್ಟೋಬರ್ 2ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ.

ಟ್ರೇಲರ್‌ ಬಿಡುಗಡೆ ಬಗ್ಗೆ ಹೊಂಬಾಳೆ ಫಿಲ್ಮ್ಸ್,ರಿಷಬ್ ಶೆಟ್ಟಿ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಿನಿಮಾ ಬದುಕಿನಲ್ಲಿ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಶ್ರೀಮುರುಳಿ

₹60ಕೋಟಿ ವಂಚನೆ ಪ್ರಕರಣ: ನಾನು ಯಾವುದೇ ತಪ್ಪು ಮಾಡಿಲ್ಲ ಎಂದ ಶಿಲ್ಪಾ ಶೆಟ್ಟಿ ಪತಿ

ಲಕ್ಷ್ಮೀ ನಿವಾಸ ಧಾರವಾಹಿಯಿಂದ ಹೊರನಡೆದ ಹಿರಿಯ ನಟಿ ಅಂಜಲಿ: ಇನ್ನೊಬ್ಬ ಹಿರಿಯ ನಟಿಯೂ ಶೀಘ್ರವೇ ಔಟ್

ಮೂರು ಲಕ್ಷ ಹಣ ಕಳುವಾಯ್ತು ಎಂದು ದೂರು ಕೊಟ್ಟ ವಿಜಯಲಕ್ಷ್ಮಿಗೆ ಶಾಕ್ ನೀಡಿದ ಪೊಲೀಸರು

ಸೀತಾರಾಮ ಧಾರವಾಹಿಗೆ ಗಗನ್ ಬದಲು ಈ ನಟ ನಾಯಕನಾಗಬೇಕಿತ್ತು: ವೈಷ್ಣವಿ ಬಿಚ್ಚಿಟ್ಟ ಸತ್ಯ

ಮುಂದಿನ ಸುದ್ದಿ
Show comments