Select Your Language

Notifications

webdunia
webdunia
webdunia
webdunia

ಸೂಪರ್ ಸ್ಟಾರ್ ರಜನಿಕಾಂತ್ ಬಾಷಾ ಬಿಡುಗಡೆ ಸಿದ್ಧ

ಸೂಪರ್ ಸ್ಟಾರ್ ರಜನಿಕಾಂತ್ ಬಾಷಾ ಬಿಡುಗಡೆ ಸಿದ್ಧ
Chennai , ಭಾನುವಾರ, 19 ಫೆಬ್ರವರಿ 2017 (12:03 IST)
ಸೂಪರ್ ಸ್ಟಾರ್ ರಜನಿಕಾಂತ್ ವೃತ್ತಿಬದುಕಿನಲ್ಲಿ ಅತಿದೊಡ್ಡ ಬ್ಲಾಕ್‌ಬಸ್ಟರ್ ’ಬಾಷಾ’ ಡಿಜಿಟಲ್ ಆವೃತ್ತಿಯಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ನೋಡಲು ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆ ಘಳಿಗೆ ಈಗ ಕೂಡಿಬಂದಿದೆ.
 
ಮಾರ್ಚ್ 3ರಂದು ಭಾರತ ಸೇರಿದಂತೆ ರಜನಿಕಾಂತ್ ಅಭಿಮಾನಿಗಳು ಹೆಚ್ಚಾಗಿರುವ ಜಪಾನ್‍ನಲ್ಲಿ ಈ ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ. ರಜನಿಕಾಂತ್ ಡೈಲಾಗ್ಸ್, ಮ್ಯಾನರಿಸಂ, ಫ್ಲ್ಯಾಶ್‍ಬ್ಯಾಕ್‌ನಲ್ಲಿ ಸಾಗುವ ಕಥೆ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು.  
 
ಇದಕ್ಕಿಂತಲೂ ಮುಖ್ಯವಾಗಿ ’ಬಾಷಾ ಭಾಗ 2’ ಬಂದಿದ್ದರೆ ಚೆನ್ನಾಗಿತ್ತು ಎಂದು ಅಭಿಮಾನಿಗಳು ಬಯಸಿದ್ದರು. ಆದರೆ ಈ ರೀತಿಯ ಚಿತ್ರ ಮತ್ತೆ ಮಾಡಲಿಕ್ಕೆ ಆಗಲ್ಲ. ತಾನು ನಟಿಸುವುದೂ ಇಲ್ಲ ಎಂದು ರಜನಿಕಾಂತ್ ಸಂದರ್ಭವೊಂದರಲ್ಲಿ ತಿಳಿಸಿದ್ದರು. ಹಾಗಾಗಿ ಸೂಪರ್ ಸ್ಟಾರ್ ಅಭಿಮಾನದ ಮೇರೆಗೆ ಬಾಷಾ ನಿರ್ಮಾಪಕ ಆರ್ ಎಂ ವೀರಪ್ಪನ್ ಈ ಚಿತ್ರದ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆತ ನನ್ನ ಲವರ್ ಅಲ್ಲ, ಗೆಳೆಯ: ಶ್ರುತಿ ಹಾಸನ್