ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಬಾಶಾ ಚಿತ್ರ ಮತ್ತೊಮ್ಮೆ ಬಿಡುಗಡೆಯಾಗಲಿದೆಯೇ? ಹೌದು ಎನ್ನುತ್ತಿದೆ ಮೂಲಗಳು.
ಡಿಸೆಂಬರ್ 12 ರಂದು ರಜನೀಕಾಂತ್ 66 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ 1995 ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ ಬಾಶಾ ಮತ್ತೊಮ್ಮೆ ಬಿಡುಗಡೆಯಾಗಲಿದೆಯಂತೆ. ಈ ಚಿತ್ರ ರಜನೀಕಾಂತ್ ಗೆ ಅತೀ ಹೆಚ್ಚು ಹೆಸರು, ಹಣ ತಂದುಕೊಟ್ಟ ಚಿತ್ರ.
ಈ ಚಿತ್ರದಲ್ಲಿ ರಜನಿ ಸಾಮಾನ್ಯ ಆಟೋ ಚಾಲಕನ ಪಾತ್ರ ನಿರ್ವಹಿಸಿದ್ದರು. ಆದರೆ ಅವರ ವಿಶಿಷ್ಟ ಮ್ಯಾನರಿಸಂನಿಂದಾಗಿ ರಜನಿ ಶೋ ಮ್ಯಾನ್ ಅನಿಸಿಕೊಂಡಿದ್ದರು. ಮತ್ತೊಮ್ಮೆ ಡಿಜಿಟಲ್ ತಂತ್ರಜ್ಞಾನದೊಂದಿಗೆ ಇದನ್ನು ರಿ ರಿಲೀಸ್ ಮಾಡಲು ಸತ್ಯ ಮೂವೀಸ್ ತಯಾರಿ ನಡೆಸುತ್ತಿದೆ.
ಆ ಕಾಲದಲ್ಲೇ ಸಾಕಷ್ಟು ನಿರ್ಮಾಪಕರ ಜೇಬು ತುಂಬಿಸಿದ ಬಾಶಾ ಈಗ ಬಿಡುಗಡೆಯಾದರೆ ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಗಳಿಕೆ ಮಾಡಲಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ