Select Your Language

Notifications

webdunia
webdunia
webdunia
webdunia

ಸೂಪರ್ ಸ್ಟಾರ್ ರಜನೀಕಾಂತ್ ಬಾಶಾ ಚಿತ್ರ ಮತ್ತೊಮ್ಮೆ ರಿಲೀಸ್?

ಸೂಪರ್ ಸ್ಟಾರ್ ರಜನೀಕಾಂತ್ ಬಾಶಾ ಚಿತ್ರ ಮತ್ತೊಮ್ಮೆ ರಿಲೀಸ್?
Chennai , ಸೋಮವಾರ, 7 ನವೆಂಬರ್ 2016 (14:55 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಬಾಶಾ ಚಿತ್ರ ಮತ್ತೊಮ್ಮೆ ಬಿಡುಗಡೆಯಾಗಲಿದೆಯೇ? ಹೌದು ಎನ್ನುತ್ತಿದೆ ಮೂಲಗಳು.

ಡಿಸೆಂಬರ್ 12 ರಂದು ರಜನೀಕಾಂತ್ 66 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ 1995 ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ ಬಾಶಾ ಮತ್ತೊಮ್ಮೆ ಬಿಡುಗಡೆಯಾಗಲಿದೆಯಂತೆ. ಈ ಚಿತ್ರ ರಜನೀಕಾಂತ್ ಗೆ ಅತೀ ಹೆಚ್ಚು ಹೆಸರು, ಹಣ ತಂದುಕೊಟ್ಟ ಚಿತ್ರ.

ಈ ಚಿತ್ರದಲ್ಲಿ ರಜನಿ ಸಾಮಾನ್ಯ ಆಟೋ ಚಾಲಕನ ಪಾತ್ರ ನಿರ್ವಹಿಸಿದ್ದರು. ಆದರೆ ಅವರ ವಿಶಿಷ್ಟ ಮ್ಯಾನರಿಸಂನಿಂದಾಗಿ ರಜನಿ ಶೋ ಮ್ಯಾನ್ ಅನಿಸಿಕೊಂಡಿದ್ದರು. ಮತ್ತೊಮ್ಮೆ ಡಿಜಿಟಲ್ ತಂತ್ರಜ್ಞಾನದೊಂದಿಗೆ ಇದನ್ನು ರಿ ರಿಲೀಸ್ ಮಾಡಲು ಸತ್ಯ ಮೂವೀಸ್ ತಯಾರಿ ನಡೆಸುತ್ತಿದೆ.

ಆ ಕಾಲದಲ್ಲೇ ಸಾಕಷ್ಟು ನಿರ್ಮಾಪಕರ ಜೇಬು ತುಂಬಿಸಿದ ಬಾಶಾ ಈಗ ಬಿಡುಗಡೆಯಾದರೆ ಬಾಕ್ಸ್  ಆಫೀಸ್ ನಲ್ಲಿ ದಾಖಲೆಯ ಗಳಿಕೆ ಮಾಡಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೇಘಾಲಯದಲ್ಲಿ ಪತ್ನಿ ಕಿರಣ್ ರಾವ್ ಜನುಮದಿನ ಆಚರಿಸಿಕೊಂಡ ಅಮೀರ್ ಖಾನ್