Select Your Language

Notifications

webdunia
webdunia
webdunia
webdunia

ಹೆಬ್ಬುಲಿ ಚಿತ್ರತಂಡಕ್ಕಾಗಿ ಅಡುಗೆ ಭಟ್ಟನಾದ ಕಿಚ್ಚ ಸುದೀಪ್

ಹೆಬ್ಬುಲಿ ಚಿತ್ರತಂಡಕ್ಕಾಗಿ ಅಡುಗೆ ಭಟ್ಟನಾದ ಕಿಚ್ಚ ಸುದೀಪ್
Bangalore , ಸೋಮವಾರ, 27 ಫೆಬ್ರವರಿ 2017 (10:25 IST)
ಬೆಂಗಳೂರು: ಹೆಬ್ಬುಲಿ ಚಿತ್ರ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಕೋಟಿ ಬಾಚಿಕೊಂಡ ಕೋಟಿ ಬಜೆಟ್ ಚಿತ್ರದ ಸದಸ್ಯರಿಗಾಗಿ ನಾಯಕ ನಟ ಸುದೀಪ್ ಬಾಣಸಿಗರಾಗಿದ್ದರಂತೆ. ಅದೂ ಜಮ್ಮು ಕಾಶ್ಮೀರದಲ್ಲಿ ಚಿತ್ರೀಕರಣ ನಡೆಸುತ್ತಿದ್ದಾಗ.


ಚಿತ್ರ ತಂಡವೇ ಈ ವಿಷಯವನ್ನು ಹೇಳಿಕೊಂಡಿದೆ. ಹೆಬ್ಬುಲಿ ಯಶಸ್ವಿಯಾಗಬೇಕಾದರೆ ಕಿಚ್ಚ ಸುದೀಪ್ ಪಾತ್ರ ಬಹಳ ದೊಡ್ಡದಂತೆ. ಕಾಶ್ಮೀರದ ಕಣಿವೆಯಲ್ಲಿ ಅತಿ ಕಷ್ಟಕರ ಪ್ರದೇಶದಲ್ಲಿ ಶೂಟಿಂಗ್ ಮಾಡುವುದು ನಿಜಕ್ಕೂ ಕಷ್ಟವಾಗಿತ್ತಂತೆ. ಚಿತ್ರತಂಡದಲ್ಲಿ ಸುಮಾರು 100 ಜನ ಇದ್ದರು.

ಇವರಿಗೆಲ್ಲಾ ಸುದೀಪ್ ಮಾಂಸದಡುಗೆ ಮಾಡಿ ಬಡಿಸುತ್ತಿದ್ದರಂತೆ. ತಾವೇ ಇಷ್ಟಪಟ್ಟು ರುಚಿ ರುಚಿಯಾದ ಅಡುಗೆ ಮಾಡಿ ಬಡಿಸುತ್ತಿದ್ದರು ಎಂದು ನಿರ್ಮಾಪಕ ಉಮಾಪತಿ ಹೇಳಿಕೊಂಡಿದ್ದಾರೆ. ಹಿಂದೊಮ್ಮೆ ಬಿಗ್ ಬಾಸ್ ವೇದಿಕೆಯಲ್ಲಿ ಅಡುಗೆ ಮಾಡಿ ಸುದೀಪ್ ಸುದ್ದಿಯಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕಿರುಕುಳದ ಕಹಿ ಮೆಟ್ಟಿ ನಿಂತು ಶೂಟಿಂಗ್`ಗೆ ಬಂದ ಮಲೆಯಾಳಿ ನಟಿ