Select Your Language

Notifications

webdunia
webdunia
webdunia
webdunia

ಸುದೀಪ್-ಶಿವಣ್ಣ ಜೋಡಿಯ ’ವಿಲನ್’ ಶುರುವಾಗಿದೆ

ಸುದೀಪ್-ಶಿವಣ್ಣ ಜೋಡಿಯ ’ವಿಲನ್’ ಶುರುವಾಗಿದೆ
Bangalore , ಮಂಗಳವಾರ, 28 ಫೆಬ್ರವರಿ 2017 (12:43 IST)
ಸುದೀಪ್ ಅಭಿನಯದ ’ಹೆಬ್ಬುಲಿ’ ಚಿತ್ರ ಬಾಕ್ಸ್ ಆಫೀಸಲ್ಲಿ ಗರ್ಜಿಸುತ್ತಿದೆ. ಇದೀಗ ಅವರ ಮುಂದಿನ ಚಿತ್ರ ’ವಿಲನ್’ ಶುರುವಾಗಿದೆ. ಇದು ಬಹುತಾರಾಗಣದ ಚಿತ್ರವಾಗಿದ್ದು ಸ್ಯಾಂಡಲ್‌ವುಡ್‌ನಲ್ಲಿ ಭರ್ಜರಿ ಸೌಂಡ್ ಮಾಡುವ ಎಲ್ಲ ನಿರೀಕ್ಷೆಗಳು ಇವೆ. 
 
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಸುದೀಪ್ ಜೋಡಿಯ ಚಿತ್ರ ಇದು. ಇವರಿಬ್ಬರನ್ನೂ ತೆರೆಗೆ ತರುತ್ತಿರುವವರು ನಿರ್ದೇಶಕ ಜೋಗಿ ಪ್ರೇಮ್. ಈಗಾಗಲೆ ಶಿವಣ್ಣ ಫಸ್ಟ್‌ಲುಕ್ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಈಗ ಸುದೀಪ್ ಭಾಗದ ಫಸ್ಟ್ ಲುಕ್ ಚಿತ್ರೀಕರಣ ನಡೆಯುತ್ತಿದೆ.
 
ಇತ್ತೀಚೆಗೆ ಸುದೀಪ್ ಮಾತನಾಡುತ್ತಾ, ಇದೇ ವರ್ಷ ಸಿನಿಮಾ ಬಿಡುಗಡೆಯಾಗಲಿದೆ ಎಂಬ ಭರವಸೆ ನೀಡಿದ್ದಾರೆ. ಮೂರು ಭಾಷೆಗಳಲ್ಲಿ ತೆರೆಗೆ ತರಲಾಗುತ್ತಿರುವ ಸಿನಿಮಾ. ಕನ್ನಡದಲ್ಲೇ ಅದ್ದೂರಿ ನಿರ್ಮಾಣದ ಚಿತ್ರ ಇದು ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮುಂದಿನ ವಾರ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ ಎಂದಿರುವ ಪ್ರೇಮ್, ಚಿತ್ರದಲ್ಲಿ ವಿಲನ್ ಯಾರು ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

’ನೀಹಾರಿಕಾ’ ನಿಶ್ಚಿತಾರ್ಥ ಸೀರೆ ಬೆಲೆ ಬರೋಬ್ಬರಿ ರೂ.1 ಲಕ್ಷ