ಬೆಂಗಳೂರು: ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದ ದಿ ವಿಲನ್ ಚಿತ್ರ ಸೆಟ್ಟೇರಿ ವರ್ಷವೇ ಕಳೆಯಿತು. ಆದರೂ, ಅದರ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿರಲಿಲ್ಲ. ಇದೀಗ ನಿರ್ದೇಶಕ ಪ್ರೇಮ್ ಆ ಕೆಲಸ ಮಾಡಿದ್ದಾರೆ.
ವಿಶಿಷ್ಟ ಹೇರ್ ಸ್ಟೈಲ್ ನಲ್ಲಿ ಮಿಂಚುತ್ತಿರುವ ಸುದೀಪ್ ಮತ್ತು ಶಿವಣ್ಣ ಎದುರುಬದುರಾಗಿರುವ ಫಸ್ಟ್ ಲುಕ್ ಬಿಡುಗಡೆಯಾಗಿದೆ. ನಾಳೆಯಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಪ್ರೇಮ್ ಹೇಳಿಕೊಂಡಿದ್ದಾರೆ.
ಸುದೀಪ್-ಶಿವಣ್ಣ ಜತೆಗೆ ತೆಲುಗಿನ ಶ್ರೀಕಾಂತ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಹಿಂದೆಂದೂ ನೋಡಿರದ ಶಿವಣ್ಣ-ಸುದೀಪರ್ ನ್ನು ಈ ಚಿತ್ರದಲ್ಲಿ ನೋಡಲಿದ್ದೀರಿ ಎಂದು ಪ್ರೇಮ್ ಹೇಳುತ್ತಾರೆ. ಚಿತ್ರಕ್ಕಾಗಿ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ ಚಿತ್ರತಂಡ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ