Select Your Language

Notifications

webdunia
webdunia
webdunia
webdunia

ಸುದೀಪ್ ’ಹೆಬ್ಬುಲಿ’ ಬಿಡುಗಡೆಗೆ ಮುಹೂರ್ತ ಫಿಕ್ಸ್

ಸುದೀಪ್ ’ಹೆಬ್ಬುಲಿ’ ಬಿಡುಗಡೆಗೆ ಮುಹೂರ್ತ ಫಿಕ್ಸ್
Bangalore , ಭಾನುವಾರ, 19 ಫೆಬ್ರವರಿ 2017 (13:06 IST)
ಕಿಚ್ಚ ಸುದೀಪ್ ಅಭಿನಯದ ಭಾರಿ ಬಜೆಟ್‌ನ ಹಾಗೂ ಅಪಾರ ನಿರೀಕ್ಷೆ ಮೂಡಿಸಿರುವ ಹೆಬ್ಬುಲಿ ಚಿತ್ರ ಇದೇ ಫೆಬ್ರವರಿ 23ರಂದು ತೆರೆಗೆ ಅಪ್ಪಳಿಸುತ್ತಿದೆ. ಈಗಾಗಲೆ ಸೆನ್ಸಾರ್‌ನಲ್ಲಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಲಾಗಿದೆ. 
 
ನಿರ್ದೇಶಕರಾಗಿ ಬದಲಾಗಿರುವ ಅದರಲ್ಲಿ ಯಶಸ್ಸನ್ನೂ ಕಂಡಿರುವ ಛಾಯಾಗ್ರಾಹಕ ಕೃಷ್ಣ ಆಕ್ಷನ್ ಕಟ್ ನಲ್ಲಿ ಚಿತ್ರ ಮೂಡಿಬಂದಿದೆ. ಸುಮಾರು 2 ಗಂಟೆ 25 ನಿಮಿಷಗಳ ಕಾಲಾವಧಿಯ ಚಿತ್ರ ಇದಾಗಿದೆ. ಆರಂಭದಿಂದಲೂ ಪೋಸ್ಟರ್, ಸುದೀಪ್ ಗೆಟಪ್, ಭಿನ್ನ ಹೇರ್‌‍ಸ್ಟೈಲ್‌ನಿಂದ ಚಿತ್ರ ಗಮನಸೆಳೆಯುತ್ತಾ ಬಂದಿದೆ.
 
ಚಿತ್ರದಲ್ಲಿ ಯೋಧನಾಗಿ ಸುದೀಪ್ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನೊಂದು ವಿಶೇಷ ಎಂದರೆ ಕ್ರೇಜಿಸ್ಟಾರ್ ರವಿಚಂದ್ರನ್ ಸಹ ಪಾತ್ರವರ್ಗಾಲ್ಲಿದಲ್ಲಿರುವುದು. ಅಮಲಾ ಪೌಲ್ ಚಿತ್ರದ ನಾಯಕಿ. ಬೆಂಗಳೂರಿನ ಸಂತೋಷ್ ಮುಖ್ಯಚಿತ್ರಮಂದಿರ ಈಗಾಗಲೆ ಹೆಬ್ಬುಲಿ ಪ್ರದರ್ಶನಕ್ಕೆ ಸಿದ್ಧವಾಗಿದೆ. ಭಾರತಾದ್ಯಂತ ಸುಮಾರು 500 ತೆರೆಗಳಿಗೆ ಹೆಬ್ಬುಲಿ ದಾಂಗುಡಿ ಇಡುತ್ತಿದೆ. ರಘುನಾಥ್ ಮತ್ತು ಉಮಾಪತಿ ಚಿತ್ರದ ನಿರ್ಮಾಪಕರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಭಾವನಾ ಕಿಡ್ನಾಪ್ ಪ್ರಕರಣದಲ್ಲಿ ಇಬ್ಬರ ಬಂಧನ