Select Your Language

Notifications

webdunia
webdunia
webdunia
webdunia

ಹೊಸ ದಾಖಲೆಗೆ ಸಿದ್ಧವಾಗಿದೆ ಸುದೀಪ್ ಹೆಬ್ಬುಲಿ

ಹೊಸ ದಾಖಲೆಗೆ ಸಿದ್ಧವಾಗಿದೆ ಸುದೀಪ್ ಹೆಬ್ಬುಲಿ
Bangalore , ಮಂಗಳವಾರ, 7 ಫೆಬ್ರವರಿ 2017 (11:19 IST)
ಸ್ಯಾಂಡಲ್‌ವುಡ್‍ನಲ್ಲಿ ಹೊಸ ದಾಖಲೆ ನಿರ್ಮಿಸಲು ಕಿಚ್ಚ ಸುದೀಪ್ ಹೆಬ್ಬುಲಿ ಚಿತ್ರ ಸಿದ್ಧವಾಗಿದೆ. ಕೃಷ್ಣ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಸುಮಾರು 500 ಪರದೆಗಳ ಮೇಲೆ ತೆರೆಕಾಣುತ್ತಿದೆ. ಕನ್ನಡ ಚಿತ್ರೋದ್ಯಮದಲ್ಲೇ ಅತ್ಯಧಿಕ ಸಂಖ್ಯೆ ಇದೆನ್ನಬಹುದು.
 
ಅತ್ಯಧಿಕ ಸಂಖ್ಯೆಯ ಕೇಂದ್ರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ವಿತರಕರು ನಿರ್ಧರಿಸಿದ್ದಾರೆಂದು ವಿತರಕರಲ್ಲಿ ಒಬ್ಬರಾಗಿರುವ ಜಾಕ್ ಮಂಜು ತಿಳಿಸಿದ್ದಾರೆ. ಕರ್ನಾಟಕ ಒಂದರಲ್ಲೇ ಸುಮಾರು 350-400 ತೆರೆಗಳನ್ನು ಅಲಂಕರಿಸಲಿದೆ ಹೆಬ್ಬುಲಿ.
 
ನೆರೆರಾಜ್ಯಗಳು ಮತ್ತು ಪರರಾಜ್ಯ ಹಾಗೂ ವಿದೇಶಗಳಲ್ಲಿ ಸುಮಾರು 100 ತೆರೆಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಒಟ್ಟಾರೆ ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಚಿತ್ರಗಳಲ್ಲಿ ಇದೂ ಒಂದು ಎನ್ನಬಹುದು. ಅದ್ದೂರಿ ಬಜೆಟ್, ತಾರಾಗಣ ಇರುವ ಚಿತ್ರದ ಬಗ್ಗೆ ನಿರೀಕ್ಷೆಗಳು ಸಾಕಷ್ಟಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ಸಮನ್ಸ್ ಜಾರಿ