ಬೆಳಗಾವಿ(ಮಾ.07): ನಾನು ಸುದೀಪ್ ಅವರನ್ನ ಭೇಟಿಯಾಗಲೇಬೇಕು. ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಇಬ್ಬರು ಅಭಿಮಾನಿಗಳು ಪೆಟ್ರೋಲ್ ಬಾಟಲ್ ಹಿಡಿದು ನಿಂತಿದ್ದ ಘಟನೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆದಿದೆ. ಹೆಬ್ಬುಲಿ ಚಿತ್ರದ ಪ್ರಚಾರಕ್ಕೆ ಸುದೀಪ್ ರಾಜ್ಯದ ಎಲ್ಲ ಕಡೆ ಭೇಟಿ ನೀಡುತ್ತಿದ್ದಾರೆ. ನಮ್ಮನ್ನೂ ಭೇಟಿಮಾಡಬೇಕೆಂದು ಭೂತರಾಯನಮಟ್ಟಿ ಗ್ರಾಮದ ಸಚಿನ್ ಪಾಟೀಲ್, ಪ್ರವೀಣ್ ಪಾಟೀಲ್ ಆತ್ಮಹತ್ಯೆಗೆ ಮುಂದಾಗಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ರಾಧಿಕಾ, ಯುವಕರನನ್ನ ವಶಕ್ಕೆ ಪಡೆದಿದ್ದು ಆತ್ಮಸಮಲೋಚನೆ ಕೊಡಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುದೀಪ್, ಸಮಯಾವಕಾಶ ಕಡಿಮೆ ಇದ್ದಿದ್ದರಿಂದ ಎಲ್ಲೆಡೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. 10-15 ದಿನಗಳಲ್ಲಿ ಎಲ್ಲ ಅಭಿಮಾನಿಗಳನ್ನ ಭೇಟಿಮಾಡುತ್ತೇನೆ. ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗಬಾರದು ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.