Publish Date: Thu, 20 Oct 2016 (11:46 IST)
Updated Date: Thu, 20 Oct 2016 (13:14 IST)
ಬೆಂಗಳೂರು: ಕಿಚ್ಚ ಸುದೀಪ್ ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಯಾವುದ್ಯಾವುದೋ ರೀತಿಯಲ್ಲಿ ಅಭಿಮಾನ ತೋರಿಸುವವರೂ ಇದ್ದಾರೆ.
ಅದೇ ರೀತಿ ಸುದೀಪ್ ತಮ್ಮ ಕೈಲಾದ ಮಟ್ಟಿಗೆ ಅಭಿಮಾನಿಗಳನ್ನು ತೃಪ್ತಿ ಪಡಿಸುತ್ತಾರೆ. ಅಂತಹದ್ದೇ ಅಭಿಮಾನಿಗಳ ಬಗ್ಗೆ ಇತ್ತೀಚೆಗೆ ಖಾಸಗಿ ಟಿವಿ ವಾಹಿನಿಯಲ್ಲಿ ವರದಿ ಪ್ರಸಾರವಾಗಿತ್ತು. ಚಿತ್ರದುರ್ಗದ ಹಿರಿಯೂರು ತಾಲೂಕಿನ ಗ್ರಾಮವೊಂದರಲ್ಲಿ ಕಿಚ್ಚನನ್ನು ದೇವರಂತೆ ಫೋಟೋ ಇಟ್ಟು ಮಾಡುತ್ತಾರೆ ಎಂದು ವರದಿಯಾಗಿತ್ತು.
ಊರಿಗೆ ಬರುವವರು ಯಾರೇ ಆದರೂ ಇಲ್ಲಿಗೆ ದೇವರಿಗೆ ಪೂಜೆ ಮಾಡುವಂತೆ ಕಿಚ್ಚನಿಗೆ ಪೂಜೆ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಅದೀಗ ಕಿಚ್ಚ ಸುದೀಪ್ ಗಮನಕ್ಕೆ ಬಂದಿದೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಉಲ್ಲೇಖಿಸಿರುವ ಕಿಚ್ಚಅಭಿಮಾನಿಗಳ ಈ ಅಭಿಮಾನಕ್ಕೆ ಏನೆಂದು ಹೇಳಲಿ. ಖಂಡಿತಾ ಸದ್ಯದಲ್ಲೇ ಈ ಗ್ರಾಮಕ್ಕೆ ಭೇಟಿಯಾಗುವುದಾಗಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ