Webdunia - Bharat's app for daily news and videos

Install App

ಸು ಫ್ರಮ್ ಸೋ ಸಿನಿಮಾಗೆ ಮಲಯಾಳದಲ್ಲಿ ಹೇಗಿದೆ ರೆಸ್ಪಾನ್ಸ್: ಕನ್ನಡದಲ್ಲಿ ಹೊಸ ದಾಖಲೆ

Krishnaveni K
ಶನಿವಾರ, 2 ಆಗಸ್ಟ್ 2025 (10:47 IST)
ಬೆಂಗಳೂರು: ಕನ್ನಡದಲ್ಲಿ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿರುವ ಸು ಫ್ರಮ್ ಸೋ ಸಿನಿಮಾ ಈಗ ಮಲಯಾಳಂನಲ್ಲೂ ಮೋಡಿ ಮಾಡುತ್ತಿದೆ. ಇನ್ನು, ಕರ್ನಾಟಕದಲ್ಲಿ ಟಿಕೆಟ್  ಮಾರಾಟ ವಿಚಾರದಲ್ಲಿ ನಿನ್ನೆ ದಾಖಲೆಯನ್ನೇ ಮಾಡಿದೆ.

ಕೇವಲ ಬಾಯಿ ಮಾತಿನ ಪ್ರಚಾರದಿಂದಲೇ ಸ್ಟಾರ್ ನಟರಿಲ್ಲದಿದ್ದರೂ ಗೆದ್ದ ಸಿನಿಮಾ ಸು ಫ್ರಮ್ ಸೋ. ಕೇವಲ 5 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾದ ಸಿನಿಮಾ ಈಗ 23 ಕೋಟಿ ರೂ. ಹೆಚ್ಚು ಗಳಿಕೆ ಮಾಡಿದೆ. ನಿನ್ನೆ ಸಿನಿಮಾ ಮಲಯಾಳಂ ಭಾಷೆಯಲ್ಲೂ ಬಿಡುಗಡೆಯಾಗಿತ್ತು.

ಮಲಯಾಳಂ ಮೂಲದ ಪ್ರಕಾರ ಸು ಫ್ರಮ್ ಸೋ ಸಿನಿಮಾ ಅಲ್ಲೂ ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ. ಒಂದೊಳ್ಳೆ ಸಿನಿಮಾ ಎಂದು ಜನ ಮೆಚ್ಚಿಕೊಂಡಿದ್ದು ಥಿಯೇಟರ್ ಗೆ ಜನ ಬರಲು ಆಸಕ್ತಿ ತೋರಿಸುತ್ತಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾಗಳು ಪರಭಾಷೆಗೆ ಹೋಗಿ ಹಿಟ್ ಆಗುವುದು ಇದೆ. ಆದರೆ ಸ್ಟಾರ್ ಗಳಿಲ್ಲದೇ ಇದ್ದರೂ ಸಿನಿಮಾ ಪರಭಾಷೆಯಲ್ಲೂ ಬಿಡುಗಡೆಯಾಗಿರುವುದೇ ವಿಶೇಷ.

ಇನ್ನು, ಕನ್ನಡದಲ್ಲಿ ನಿನ್ನೆ ಗಂಟೆಗೆ 11 ಸಾವಿರ ಟಿಕೆಟ್ ಮಾರಾಟವಾಗಿ ಹೊಸ ದಾಖಲೆ ಮಾಡಿದೆ. ಇದಕ್ಕೆ ಮೊದಲು ಕಿಚ್ಚ ಸುದೀಪ್ ನಾಯಕರಾಗಿದ್ದ ಮ್ಯಾಕ್ಸ್ ಸಿನಿಮಾ ಗಂಟೆಗೆ 9 ಸಾವಿರ ಟಿಕೆಟ್ ಮಾರಾಟವಾಗಿತ್ತು. ಇದೀಗ ಸು ಫ್ರಮ್ ಸೋ ಆ ದಾಖಲೆಯನ್ನೂ ಮುರಿದಿದೆ. ಇಂದೂ ಕೂಡಾ ಚಿತ್ರದ ಟಿಕೆಟ್ ಬಿಸಿ ದೋಸೆಯಂತೆ ಖಾಲಿಯಾಗುತ್ತಿದೆ. ನಾಳೆ ಭಾನುವಾರವಾಗಿದ್ದು ನಾಳೆಯೂ ಟಿಕೆಟ್ ಗೆ ಡಿಮ್ಯಾಂಡ್ ಹೆಚ್ಚಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಹಾಕಿದ್ದ ಮೂವರು ಅರೆಸ್ಟ್

ಸಿನಿಮಾದಲ್ಲಿ ನೀತಿ ಪಾಠ ಹೇಳಿದ್ರೆ ಸಾಲದು ಎಂದ ರಾಕ್ ಲೈನ್ ವೆಂಕಟೇಶ್ ಬುದ್ಧಿ ಹೇಳಿದ್ರೆ ದರ್ಶನ್ ಫ್ಯಾನ್ಸ್ ಹೇಳಿದ್ದೇನು

ಭಾವ ಬಂದರೋ ಹಾಡಿಗೆ ರಾಜ್ ಬಿ ಶೆಟ್ಟಿ ಭರ್ಜರಿ ಸ್ಟೆಪ್ಸ್: ವಿಡಿಯೋ

ದರ್ಶನ್ ಸರ್ ಜೊತೆ ನಾನಿದ್ದೇನೆ ಎಂದ ಧ್ರುವ ಸರ್ಜಾ: ಕೆಡಿ ನೋಡಲಿ ಅಂತಾನಾ ಎಂದ ಡಿಬಾಸ್ ಫ್ಯಾನ್ಸ್

ಪ್ರಥಮ್ ನಡೆದುಕೊಂಡ ರೀತಿ ಸರಿಯಲ್ಲ, ನಾನು ದರ್ಶನ್ ಪರ ನಿಲ್ಲುತ್ತೇನೆ: ನಟ ಧ್ರುವ ಸರ್ಜಾ

ಮುಂದಿನ ಸುದ್ದಿ
Show comments