ನವದೆಹಲಿ: ಸುಪ್ರೀಂ ಕೋರ್ಟ್ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಮೊದಲು ರಾಷ್ಟ್ರ ಗೀತೆ ಪ್ರಸಾರ ಮಾಡುವುದು ಕಡ್ಡಾಯಗೊಳಿಸಿದೆ. ಇದರ ಹಿಂದೆ ಒಂದು ರೋಚಕ ಕತೆ ಇದೆ.
2002 ರಲ್ಲಿ ಭೋಪಾಲ್ ನ ಚಿತ್ರಮಂದಿರವೊಂದರಲ್ಲಿ ನಡೆದ ಒಂದು ಘಟನೆ ಇದಕ್ಕೆ ಕಾರಣ. ಅಂದು ಚಿತ್ರ ಮಂದಿರವೊಂದರಲ್ಲಿ ಕಭೀ ಖುಷೀ ಕಭೀ ಗಮ್ ಸಿನಿಮಾ ಪ್ರದರ್ಶನವಾಗುತ್ತಿತ್ತು. ಅದರ ಮಧ್ಯೆ ಒಂದು ದೃಶ್ಯದಲ್ಲಿ ರಾಷ್ಟ್ರಗೀತೆ ಪ್ರಸಾರವಾಗುತ್ತದೆ.
ರಾಷ್ಟ್ರ ಗೀತೆ ಸಿನಿಮಾ ಮಧ್ಯೆ ಬಂದರೆ ಸಾದಾರಣವಾಗಿ ಯಾರೂ ಎದ್ದು ನಿಂತು ಗೌರವ ಸೂಚಿಸುವ ಗೋಜಿಗೆ ಹೋಗುವುದಿಲ್ಲ. ಆದರೆ ಶ್ಯಾಮ್ ನಾರಾಯಣ್ ಎಂಬ ಪ್ರೇಕ್ಷಕ ಎದ್ದು ನಿಂತು ಗೌರವ ಸೂಚಿಸಿದರು. ಇವರನ್ನು ಎಲ್ಲಾ ಪ್ರೇಕ್ಷಕರು ಅಪಹಾಸ್ಯ ಮಾಡಿದರು. ಅವರ ಮೇಲೆ ಕಾಗದ ಎಸೆದರು. ಕೈಗೆ ಸಿಕ್ಕಿದ್ದನ್ನು ಎಸೆದರು. ಆದರೂ ಅವರು ರಾಷ್ಟ್ರ ಗೀತೆ ಮುಗಿಯುವವರೆಗೆ ಎದ್ದು ನಿಂತರು.
ಆದರೆ ಅಷ್ಟಕ್ಕೆ ಅವರು ಸುಮ್ಮನಾಗಲಿಲ್ಲ. ಯಾವುದೋ ಚಾನೆಲ್ ಎದುರು ಕೂರಲಿಲ್ಲ. ಸೀದಾ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದರು.14 ವರ್ಷ ನಿರಂತರವಾಗಿ ರಾಷ್ಟ್ರ ಗೀತೆಗಾಗಿ ಹೋರಾಡಿದರು. ಅವರ ಈ ನಿರಂತರ ಹೋರಾಟಕ್ಕೆ ಫಲ ಸಿಕ್ಕಿದೆ. ಕೊನೆಗೂ ಸುಪ್ರೀಂ ಕೋರ್ಟ್ ಚಿತ್ರ ಮಂದಿರಗಳಲ್ಲಿ ರಾಷ್ಟ್ರ ಗೀತೆ ಕಡ್ಡಾಯ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ