Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ತಲುಪಿದ ಸೃಜನ್ ಲೋಕೇಶ್ ಸಿನಿಮಾ

ಆಸ್ಟ್ರೇಲಿಯಾ ತಲುಪಿದ ಸೃಜನ್ ಲೋಕೇಶ್ ಸಿನಿಮಾ
ಬೆಂಗಳೂರು , ಮಂಗಳವಾರ, 5 ನವೆಂಬರ್ 2019 (10:31 IST)
ಬೆಂಗಳೂರು: ಸೃಜನ್ ಲೋಕೇಶ್ ತಮ್ಮದೇ ಹೋಂ ಬ್ಯಾನರ್‍ನಲ್ಲಿ ನಿರ್ಮಿಸಿ, ನಟಿಸಿದ್ದ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾ ಹಿಟ್ ಆಗಿತ್ತು. ಸಿನಿಮಾದ ಯಶಸ್ಸಿನಿಂದ ಸೃಜನ್ ಕೂಡಾ ಖುಷಿಯಾಗಿದ್ದರು.


ಇದೀಗ ಎಲ್ಲಿದ್ದೆ ಇಲ್ಲಿ ತನಕ ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾಗುತ್ತಿದೆ. ಸೃಜನ್ ಜತೆಗೆ ಹರಿಪ್ರಿಯಾ ನಾಯಕಿಯಾಗಿ ನಟಿಸಿರುವ ಎಲ್ಲಿದ್ದೆ ಇಲ್ಲಿ ತನಕ ಈ ವಾರ ಆಸ್ಟ್ರೇಲಿಯಾದಲ್ಲಿ ತೆರೆ ಕಾಣುತ್ತಿದೆ. ಈ ವಿಚಾರವನ್ನು ಸ್ವತಃ ಸೃಜನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಸಿನಿಮಾದ ಬಳಿಕ ಇದೇ ಚಿತ್ರತಂಡದೊಂದಿಗೆ ಮತ್ತೊಂದು ಸಿನಿಮಾ ಮಾಡಲು ಸೃಜನ್ ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಕಿರುತೆರೆ ಬಿಟ್ಟು ಬೆಳ್ಳಿ ತೆರೆಯಲ್ಲೇ ಸೃಜನ್ ಬ್ಯುಸಿಯಾಗುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ: ನಾಲ್ಕನೇ ವಾರಕ್ಕೆ ಏಳು ಮಂದಿ ನಾಮಿನೇಟ್