ಬೆಂಗಳೂರು: ಅಪ್ಪಟ ಕನ್ನಡ ಬೆಡಗಿ ‘ಕಿಸ್’ ಚೆಲುವೆ ಶ್ರೀಲೀಲಾ ಈಗ ತೆಲುಗು ಸಿನಿಮಾವೊಂದನ್ನು ಒಪ್ಪಿಕೊಂಡ ಸುದ್ದಿ ಬಂದಿದೆ.
ತೆಲುಗಿನಲ್ಲಿ ‘ಪೆಲ್ಲಿಸಂದಡಿ’ ಸಿನಿಮಾಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ಶ್ರೀಕಾಂತ್ ಪುತ್ರ ರೋಷನ್ ಶ್ರೀಕಾಂತ್ ಈ ಸಿನಿಮಾಗೆ ನಾಯಕ. ಈಗಾಗಲೇ ಕನ್ನಡದಲ್ಲಿ ಧ್ರುವ ಸರ್ಜಾ ಜೊತೆ ‘ದುಬಾರಿ’, ಧನ್ವೀರ್ ಗೌಡ ಜೊತೆ ‘ಬೈ ಟು ಲವ್’ ಸಿನಿಮಾಗೆ ನಾಯಕಿಯಾಗಿರುವ ಶ್ರೀಲೀಲಾ ಈಗ ತೆಲುಗಿಗೂ ಕಾಲಿಟ್ಟಿದ್ದಾರೆ. ಸದ್ಯದಲ್ಲೇ ತೆಲುಗು ಸಿನಿಮಾ ಶೂಟಿಂಗ್ ನಲ್ಲಿ ಶ್ರೀಲೀಲಾ ಪಾಲ್ಗೊಳ‍್ಳಲಿದ್ದಾರೆ. ಇದರೊಂದಿಗೆ ಶ್ರೀಲೀಲಾ ಈ ವರ್ಷ ಮೂರು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.