Webdunia - Bharat's app for daily news and videos

Install App

13 ವರ್ಷದಲ್ಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಳಂತೆ ಬಾಲಿವುಡ್ ನಟಿ

Webdunia
ಸೋಮವಾರ, 6 ಮಾರ್ಚ್ 2017 (10:26 IST)
ಕಳೆದ ಕೆಲ ದಿನಗಳ ಹಿಂದೆ ದಕ್ಷಿಣ ಭಾರತದ ಪ್ರಖ್ಯಾತ ನಟಿ ನಟಿಯೋರ್ವಳು ಲೈಂಗಿಕ ದೌರ್ಜನ್ಯಕ್ಕೊಳಗಾದ ಸುದ್ದಿ ಸಂಪೂರ್ಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅದರ ನಂತರ ಅನೇಕರು ತಾವು ಲೈಂಗಿಕ ದೌರ್ಜನ್ಯಕ್ಕೊಳಗಾದ ಬಗ್ಗೆ ಹೇಳಿಕೊಂಡಿದ್ದರು. ಮತ್ತೀಗ ಬಾಲಿವುಡ್‌ನ ಬೇಡಿಕೆಯ ನಟಿ ಸೋನಮ್ ಕಪೂರ್ ಕೂಡ ತಮಗೆ ಬಾಲ್ಯದಲ್ಲಾದ ಕಹಿ ಅನುಭವವನ್ನು ಹೊರಹಾಕಿದ್ದಾರೆ.
ಇತ್ತೀಚಿಗೆ ಮ್ಯಾಗ್‌ಜೀನ್ ಒಂದಕ್ಕೆ ಸಂದರ್ಶನ ನೀಡಿ ಮಾತನಾಡುತ್ತಿದ್ದ ಸೋನಮ್, ಚಿತ್ರರಂಗಕ್ಕೆ ಬರುವ ಮೊದಲು ನಾನು ಸಾರ್ವಜನಿಕ ಸ್ಥಳದಲ್ಲಿ ಮುಕ್ತವಾಗಿ ಓಡಾಡಿಕೊಂಡಿರುತ್ತಿದ್ದೆ. ನನಗೆ 13 ವರ್ಷವಾಗಿದ್ದಾಗ ಚಿತ್ರಮಂದಿರವೊಂದರಲ್ಲಿ ವ್ಯಕ್ತಿಯೋರ್ವ ಮೈಮುಟ್ಟಿ ಅಸಭ್ಯವಾಗಿ ನಡೆದುಕೊಂಡಿದ್ದ. ಈ ಕುರಿತು ಶಿಕ್ಷಕಿಯರಲ್ಲಿ ಹೇಳಿಕೊಂಡಿದ್ದೆ. ಅದಕ್ಕವರು ಇದು ಲೈಂಗಿಕ ದೌರ್ಜನ್ಯವಲ್ಲ. ಎಲ್ಲಾ ಸಂದರ್ಭಗಳಲ್ಲಿ ಇದು ನಡೆಯುತ್ತದೆ, ಎಂದಿದ್ದರು. ಆದರೆ ಆ ವಯಸ್ಸಲ್ಲಿ ಕೂಡ ನನಗದು ಲೈಂಗಿಕ ದೌರ್ಜನ್ಯ ಎಂಬ ಅರಿವಿತ್ತು ಎಂದಿದ್ದಾರೆ.
 
ಶಾಲೆಗಳಲ್ಲಿ ಇಂದಿಗೂ ಸಹ ಲೈಂಗಿಕ ಶಿಕ್ಷಣ ಪರಿಣಾಮಕಾರಿಯಾಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿರುವ ಅವರು ಶಿಕ್ಷಕರೂ ಕೂಡ ಇಂತಹ ಪ್ರಕರಣಗಳನ್ನು ನಿರ್ವಹಿಸಲು ಶಕ್ತರಾಗಿಲ್ಲ. ಇದೂವರೆಗೂ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳು ಆಗಿಲ್ಲ. ಇದರಿಂದ ಹುಡುಗಿಯರು ಖಿನ್ನತೆಗೆ ಜಾರುತ್ತಾರೆ. ಅದಕ್ಕಿಂತ ಕೆಟ್ಟ ಸ್ಥಿತಿ ಬೇರೊಂದಿಲ್ಲ. ನಮ್ಮ ದೇಶದಲ್ಲಿ ಸೇರಿದಂತೆ ಜಗತ್ತಿನ ಯಾವುದೇ ದೇಶದಲ್ಲಿ ಮಹಿಳೆಗೆ ಸುರಕ್ಷಿತ ಸ್ಥಳವಿಲ್ಲ ಎಂದು ಹೇಳಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ