Select Your Language

Notifications

webdunia
webdunia
webdunia
webdunia

ಶುಭಾ ಪೂಂಜಾಗೆ ಹೀಗೂ ಒಂದು ಟೈಟಲ್!

ಶುಭಾ ಪೂಂಜಾಗೆ ಹೀಗೂ ಒಂದು ಟೈಟಲ್!
Bangalore , ಸೋಮವಾರ, 3 ಜುಲೈ 2017 (09:01 IST)
ಬೆಂಗಳೂರು: ಸಿನಿಮಾ ತಾರೆಯರಿಗೆ ಒಂದೊಂದು ಸ್ಟಾರ್ ಎಂದು ಟೈಟಲ್ ಕೊಡುವುದು ಸಾಮಾನ್ಯ. ಅದೆಲ್ಲಾ ಅವರವರ ಯಶಸ್ಸು, ಸಿನಿಮಾ, ಮ್ಯಾನರಿಸಂ ನೋಡಿ ಕೊಡುವಂತದ್ದು. ಆದರೆ ನಾಯಕಿ ಶುಭಾ ಪೂಂಜಾಗೆ ಕೊಟ್ಟ ಟೈಟಲ್ ಮಾತ್ರ ವಿಚಿತ್ರವಾಗಿದೆ.


ಅಂತಹದ್ದೇನು ಟೈಟಲ್ ಇದು ಅಂತೀರಾ? ‘ಮೋದಕ ತಾರೆ’! ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಮೋಹಕ ತಾರೆ ಎಂಬ ಬಿರುದಿದೆ. ಆದರೆ ಶುಭಾ ಪೂಂಜಾಗೆ ಮೋದಕ ತಾರೆ ಎಂದು ಬಿರುದು ನೀಡಲಾಗಿದೆ.

ಅಂದ ಹಾಗೆ ಇಂತಹದ್ದೊಂದು ವಿಚಿತ್ರ ಟೈಟಲ್ ಕೊಟ್ಟಿರುವುದು ಅವರು ಇದೀಗ ನಟಿಸುತ್ತಿರುವ ‘ನರಗುಂದ ಬಂಡಾಯ’ ಚಿತ್ರದ ನಿರ್ದೇಶಕ ನಾಗೇಂದ್ರ ಮಾಗಡಿ. ಅದೇನು ಯೋಚನೆ ಮಾಡಿ ಈ ಬಿರುದುಕೊಟ್ಟರೋ. ಅಂತೂ ಶುಭಾ ಪೂಂಜಾ ಮಾತ್ರ ಚಿತ್ರಕ್ಕಾಗಿ ಫುಲ್ ತಯಾರಿ ನಡೆಸಿದ್ದು, ಬರೋಬ್ಬರಿ 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮನಾಗುತ್ತಿರುವ ಸಂಭ್ರಮದಲ್ಲಿ ಸಿಂಪಲ್ ಹುಡುಗಿ: ತಾಯ್ತನಕ್ಕೆ ಬಣ್ಣ ತುಂಬಿದ ಶ್ವೇತಾ