Select Your Language

Notifications

webdunia
webdunia
webdunia
webdunia

ಶ್ರುತಿ ಹಾಸನ್ ಈತನನ್ನು ಪ್ರೇಮಿಸುತ್ತಿದ್ದಾರಾ?

ನಟಿ ಶ್ರುತಿ ಹಾಸನ್
Mumbai , ಶನಿವಾರ, 18 ಫೆಬ್ರವರಿ 2017 (13:00 IST)
ನಟಿ ಶ್ರುತಿ ಹಾಸನ್ ಯಾರೊಂದಿಗಾದರೂ ಡೇಟಿಂಗ್‌ನಲ್ಲಿದ್ದಾರಾ? ಆತನೊಂದಿಗೆ ವ್ಯಾಲೆಂಟೇನ್ಸ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರಾ? ಹೌದು ಎನ್ನುತ್ತಿವೆ ಮೂಲಗಳು. ಇದಕ್ಕೆ ಕಾರಣ...ಪ್ರೇಮಿಗಳ ದಿನಾಚರಣೆ ದಿನ ಶ್ರುತಿ ತನ್ನ ಬಾಯ್‌ಫ್ರೆಂಡ್ ಜತೆಗೆ ಕಾಣಿಸಿಕೊಂಡಿರುವುದು.
 
ಮುಂಬೈ ಏರ್‌ಪೋರ್ಟ್‌‍ನಲ್ಲಿ ಮೈಕೇಲ್ ಕೋರ್ಸಾಲೆ ಜತೆಗೆ ಶ್ರುತಿ ಹಾಸನ್ ಕಾಣಿಸಿದ್ದಾರೆ. ಕಳೆದ ಮೂರು ತಿಂಗಳಿಂದ ಆತನನ್ನು ಪ್ರೇಮಿಸುತ್ತಿದ್ದಾರಂತೆ. ಅಷ್ಟೇ ಅಲ್ಲದೆ ಆತನನ್ನು ತನ್ನ ತಂದೆ ಕಮಲ್ ಹಾಸನ್‌ಗೂ ಪರಿಚಯಿಸಿದ್ದಾಳಂತೆ. ಇಷ್ಟಕ್ಕೂ ಯಾರೀ ಕೋರ್ಸಾಲೆ?
 
ಇಟಲಿ ಮೂಲದವ. ಲಂಡನ್‌ನಲ್ಲಿ ನಟ. ಸದ್ಯಕ್ಕೆ ಬೆಹನ್ ಹೋಗಿ ತೇರಿ ಎಂಬ ಚಿತ್ರದಲ್ಲಿ ಶ್ರುತಿ ಅಭಿನಯಿಸುತ್ತಿದ್ದಾರೆ. ಇದರೊಂದಿಗೆ ಆಕೆಯೊಂದಿಗೆ ಟೈಮ್ ಸ್ಪೆಂಡ್ ಮಾಡಲು ಆತ ಮುಂಬೈಗೆ ಬಂದಿದ್ದ. ಆಗ ಇಬ್ಬರು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋವನ್ನು ಸ್ವತಃ ಶ್ರುತಿ ತನ್ನ ಇನ್‍ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. "ಪ್ರತಿ ಹೆಜ್ಜೆ ಮುಖ್ಯ. ಅದು ಬೆರೆತೆ ಹಾಕಿದರೂ ಒಂಟಿಯಾಗಿ ಹಾಕಿದರೂ...ನಿಮ್ಮ ಸ್ವಂತ ಬೆಳಕಿಗಾಗಿ ಹೆಜ್ಜೆ ಹಾಕಬೇಕು" ಎಂದು ಬರೆದುಕೊಂಡಿದ್ದಾರೆ ಶ್ರುತಿ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಕ್ಸ್ ಮೆನ್ ಹೀರೋಗೆ ಚರ್ಮ ಕ್ಯಾನ್ಸರ್