Publish Date: Sun, 23 Feb 2020 (09:06 IST)
Updated Date: Sun, 23 Feb 2020 (09:08 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಯ್ಯಪ್ಪ ಮಾಲೆ ಧರಿಸಿದ್ದು, ಶಬರಿ ಮಾಲೆ ಯಾತ್ರೆಗೆ ಸಿದ್ಧರಾಗಿದ್ದಾರೆ.
ತಮ್ಮ ಸಂಗಡಿಗರ ಜತೆಗೂಡಿ ಬೆಂಗಳೂರಿನ ದೇವಾಲಯವೊಂದರಲ್ಲಿ ಸಾಂಪ್ರದಾಯಿಕವಾಗಿ ಪೂಜಾ ವಿಧಿ ವಿಧಾನದ ಮೂಲಕ ಅಯ್ಯಪ್ಪ ವ್ರತ ಆರಂಭಿಸಿರುವ ಶಿವಣ್ಣ ಸದ್ಯದಲ್ಲೇ ಅಯ್ಯಪ್ಪ ದರ್ಶನಕ್ಕೆ ಹೊರಡಲಿದ್ದಾರೆ.
ಡಾ. ರಾಜ್ ಕಾಲದಿಂದಲೂ ಅವರ ಕುಟುಂಬದಲ್ಲಿ ಈ ಸಂಪ್ರದಾಯ ಪಾಲಿಸಿಕೊಂಡು ಬರಲಾಗುತ್ತಿದೆ. ಇಂದಿಗೂ ಅದನ್ನು ಶಿವಣ್ಣ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.