Publish Date: Thu, 06 Sep 2018 (07:25 IST)
Updated Date: Thu, 06 Sep 2018 (07:27 IST)
ಬೆಂಗಳೂರು : ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ನಟಿಸಿದ ಟಗರು ಸಿನಿಮಾದ ಕುರಿತಾಗಿ ನಟಿ ಸಿಂಧು ಲೋಕನಾಥ್ ನೀಡಿದ ಹೇಳಿಕೆ ಬಗ್ಗೆ ಇದೀಗ ಶಿವರಾಜ್ ಕುಮಾರ್ ಅಭಿಮಾನಿಗಳು ಪುಲ್ ಗರಂ ಆಗಿದ್ದಾರೆ.
ಹೌದು. ನಿರ್ದೇಶಕ ದುನಿಯಾ ಸೂರಿ ಅವರು ನಿರ್ದೇಶಿಸಿರುವ ‘ಟಗರು’ ಸಿನಿಮಾ ಫೆಬ್ರವರಿ 23 ರಂದು ರಿಲೀಸ್ ಆಗಿ ಇಂದಿಗು ಕೆಲವು ಥೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದ್ದು, ಈ ವರ್ಷದ ಸೂಪರ್ ಹಿಟ್ ಸಿನಿಮಾವಾಗಿ ಹೊರ ಹೊಮ್ಮಿದೆ. ಹೀಗಿರುವಾಗ ನಟಿ ಸಿಂಧೂ ಲೋಕನಾಥ್ ಅವರು ಶೋವೊಂದರಲ್ಲಿ ಟಗರು ಸಿನಿಮಾದ ಬಗ್ಗೆ ಹೇಳಿದ್ದನ್ನು ಕೇಳಿ ಶಿವರಾಜ್ ಕುಮಾರ್ ಅಭಿಮಾನಿಗಳು ಕೋಪಗೊಳ್ಳುವುದು ಸಹಜವೇ.
ಸಿಂಧೂ ಲೋಕನಾಥ್ ರ್ಯಾಪಿಡ್ ರಶ್ಮಿ ಷೋನಲ್ಲಿ ಇತ್ತೀಚೀನ ದಿನಗಳಲ್ಲಿ ಸಿನಿಮಾ ನೋಡಿ ಎಲ್ಲ ಹೊಗಳಿದ್ರು ಆದರೆ ಅದೇ ಚಿತ್ರವನ್ನ ನೀವು ನೋಡಿದಾಗ ಈ ಮೂವೀ ಅಷ್ಟರಲ್ಲೇ ಅನ್ನಿಸುದ್ದು ಯಾವುದು ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಸಿಂಧೂ ಲೋಕನಾಥ್ ಟಗರು ಸಿನಿಮಾ ಎಂದು ಹೇಳಿದ್ದಾರೆ. ಈ ಹೇಳಿಕೆ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಬೇಸರ ತಂದಿದ್ದು, ಸಿಂಧೂ ಲೋಕನಾಥ್ ವಿರುದ್ದ ಆಕ್ರೋಶ ವ್ಯಕ್ತಪಡೆಸಿದ್ದಾರೆ .
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.