Webdunia - Bharat's app for daily news and videos

Install App

ಜೇಮ್ಸ್ ಕಾರ್ಯಕ್ರಮದಲ್ಲಿ ಪುನೀತ್ ನೆನೆದು ಕಣ್ಣೀರು ಹಾಕಿದ ಶಿವರಾಜ್ ಕುಮಾರ್

Webdunia
ಸೋಮವಾರ, 7 ಮಾರ್ಚ್ 2022 (10:33 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯ ಸಿನಿಮಾ ಜೇಮ್ಸ್ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ಪ್ರಚಾರ ನಿಮಿತ್ತ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಈ ವೇಳೆ ಮಾತನಾಡುವಾಗ ಶಿವರಾಜ್ ಕುಮಾರ್ ತಮ್ಮನನ್ನು ನೆನೆದು ಕಣ್ಣೀರು ಹಾಕಿದ್ದಾರೆ.

ಜೇಮ್ಸ್ ನಲ್ಲಿ ಪುನೀತ್ ಪಾತ್ರಕ್ಕೆ ಶಿವಣ್ಣ ಡಬ್ ಮಾಡಿದ್ದಾರೆ. ತಮ್ಮನ ಪಾತ್ರಕ್ಕೆ ಡಬ್ ಮಾಡುವಾಗ ಭಯವಾಗುತ್ತಿತ್ತು. ಮೊದಲು ನಿರ್ದೇಶಕ ಚೇತನ್ ಗೆ ನನ್ನ ಧ್ವನಿ ಬೇಡ ಎಂದೇ ಹೇಳಿದ್ದೆ. ಅವನದ್ದೇ ಧ‍್ವನಿ ಬಳಸಲು ನೋಡಿದರು, ಮಿಮಿಕ್ರಿಯವರಿಂದ ಮಾಡಿಸಿ ನೋಡಿದರು. ಹಾಗಿದ್ದರೂ ಯಾಕೋ ಸರಿ ಬರಲಿಲ್ಲ. ಹಾಗಾಗಿ ನಾನು ಸ್ವಲ್ಪ ಟ್ರೈ ಮಾಡಿದ್ದೇನೆ’ ಎಂದು ಶಿವಣ್ಣ ಹೇಳಿದ್ದಾರೆ.

ಇನ್ನು, ತಮ್ಮನನ್ನು ನೆನೆದು ಭಾವುಕರಾದ ಶಿವಣ್ಣ ‘ಕಳೆದ ನಾಲ್ಕು ತಿಂಗಳಿನಿಂದ ನಗ್ತೀವಿ, ಊಟ ಮಾಡ್ತೀವಿ, ಶೂಟಿಂಗ್ ನಲ್ಲಿ ಭಾಗಿಯಾಗ್ತೀವಿ. ಆದರೆ ಮನಸ್ಸಿನಲ್ಲಿರುವ ನೋವು ಕಡಿಮೆಯಾಗ್ತಿಲ್ಲ. ನೆನೆಸಿಕೊಂಡಾಗಲೆಲ್ಲಾ ನೋವು ಜಾಸ್ತಿಯಾಗುತ್ತದೆ. ಅವನ ಬಗ್ಗೆ ಏನು ಮಾತಾಡಲಿ?’ ಎಂದು ಕಣ್ಣೀರು ಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಮಾನದಲ್ಲಿ ನೆಚ್ಚಿನ ನಟ ಹರ್ಷವರ್ಧನ್‌ರನ್ನು ನೋಡುತ್ತಿದ್ದ ಹಾಗೇ ಮಹಿಳಾ ಅಭಿಮಾನಿ ಹೀಗೇ ಮಾಡೋದಾ, Viral Video

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು

Madenur Manu: ಶಿವಣ್ಣ, ಡಿ ಬಾಸ್ ಬಗ್ಗೆ ನಾನು ಹಾಗೆ ಹೇಳಂಗೇ ಇಲ್ಲ ಸಾರ್.. : ಮಡೆನೂರು ಮನು

ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರಂತೆ: ನಾಲಿಗೆ ಹರಿಬಿಟ್ಟ ರಾಮ್ ಗೋಪಾಲ್ ವರ್ಮಾ

ಮುಂದಿನ ಸುದ್ದಿ
Show comments