ಸ್ವಾತಂತ್ರ್ಯ ದಿನವೇ ದ್ರೋಣ ಟೀಸರ್ ಬಿಡುಗಡೆ ಮಾಡುತ್ತಿರುವುದರ ಕಾರಣ ವಿವರಿಸಿದ ಶಿವರಾಜ್ ಕುಮಾರ್

ಬುಧವಾರ, 14 ಆಗಸ್ಟ್ 2019 (08:56 IST)
ಬೆಂಗಳೂರು: ಶಿವರಾಜ್ ಕುಮಾರ್ ಅಭಿನಯದ ದ್ರೋಣ ಸಿನಿಮಾದ ಟೀಸರ್ ನಾಳೆ ಅಂದರೆ ಸ್ವಾತಂತ್ರ್ಯೋತ್ಸವ ದಿನ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಶಿವಣ್ಣ ಸ್ಪೆಷಲ್ ಆಗಿ ವಿಡಿಯೋ ಸಂದೇಶ ನೀಡಿದ್ದಾರೆ.


ಈ ದಿನವೇ ತಮ್ಮ ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿರುವುದಕ್ಕೆ ವಿಶೇಷ ಕಾರಣವಿದೆ ಎಂದು ಶಿವಣ್ಣ ಹೇಳಿಕೊಂಡಿದ್ದಾರೆ. ಈ ಸಿನಿಮಾದ ಸಬ್ಜೆಕ್ಟ್ ಕೂಡಾ ಹಾಗೇ ಇದೆ. ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದಾಗಿದೆ ಎಂದಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಸ್ವತಂತ್ರವಾಗಿ ಕೆಲಸ ಮಾಡುವ ವಾತಾವರಣವಿರುವುದು ಎಷ್ಟು ಮುಖ್ಯ, ಸ್ವಾತಂತ್ರ್ಯವನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಮತ್ತು ಒಬ್ಬ ಶಿಕ್ಷಕ ಹೇಗಿರಬೇಕು ಎಂಬ ವಿಷಯ ಈ ಸಿನಿಮಾದಲ್ಲಿದೆ. ಹಾಗಾಗಿ ಆಗಸ್ಟ್ 15 ರಂದೇ ಬಿಡುಗಡೆ ಮಾಡುತ್ತಿದ್ದೇವೆ. ಎಲ್ಲರೂ ನೋಡಿ ಪ್ರತಿಕ್ರಿಯೆ ಹೇಳಬೇಕು ಎಂದು ಶಿವಣ್ಣ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನೆರೆಪೀಡಿತರ ನೆರವಿಗೆ ಧಾವಿಸಿದ ರಾಂಧವ!