ಮಗಳ ಮೊದಲ ನಿರ್ಮಾಣದ ಸಿನಿಮಾದ ಟೀಸರ್ ನೋಡಿ ಶಿವಣ್ಣ ಫುಲ್ ಫಿದಾ

Sampriya
ಸೋಮವಾರ, 9 ಸೆಪ್ಟಂಬರ್ 2024 (16:27 IST)
Photo Courtesy X
ಬೆಂಗಳೂರು: 'ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಅವರು ಸ್ಯಾಂಡಲ್‌ವುಡ್‌ಗೆ ನಿರ್ಮಾಪಕಿಯಾಗಿ ಎಂಟ್ರಿಕೊಡುತ್ತಿದ್ದಾರೆ. ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಈಗಾಗಲೇ ಗೀತಾ ಪಿಕ್ಷರ್ಸ್ ಮೂಲಕ ವೇದ ಮತ್ತು ಭೈರತಿ ರಣಗಲ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.  ಇದೀಗ ನಿವೇದಿತಾ ಅವರ ನಿರ್ಮಾಣದ ಸಿನಿಮಾಗೆ ಫೈರ್ ಫ್ಲೈ ಎಂದು ಹೆಸರಿಡಲಾಗಿದೆ.

ಇನ್ನೂ ಮಗಳ ನಿರ್ಮಾಣದಲ್ಲಿ ಮೂಡಿಬಂದಿರುವ ಸಿನಿಮಾದ ಟೀಸರ್ ನೋಡಿ ಶಿವರಾಜ್‌ಕುಮಾರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇಡೀ ತಂಡದ ಕೆಲಸದ ಮೇಲಿನ ಶ್ರದ್ಧೆ, ಗೆಲ್ಲಲೇ ಬೇಕು ಅನ್ನೋ ಅವರ ಛಲ ನೋಡಿ ತುಂಬ ಖುಷಿ ಆಯ್ತು. ಇವತ್ತು ರಿಲೀಸ್ ಆಗಿರುವ ಚಿತ್ರದ ಟೀಸರ್ ಅದಕ್ಕೆ ಸಾಕ್ಷಿ. ಹೊಸ ತಂಡದ ಮೇಲೆ ನಿಮ್ಮೆಲ್ಲರ ಪ್ರೀತಿ ಇರಲಿ ಎಂದು ಹೇಳಿಕೊಂಡರು.

ಟೀಸರ್ ನೋಡಿದವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಯುವ ಪ್ರತಿಭೆ ವಂಶಿ ನಿರ್ದೇಶಿಸಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.   ವಂಶಿಗೆ ಜೋಡಿಯಾಗಿ ರಚನಾ ಇಂದರ್ ನಟಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಮ್ ಬಾಸ್ ನೋಡ್ಬಹುದು..: ದರ್ಶನ್ ಗೆ ಕೋರ್ಟ್ ಚಿಂತೆಯಾದ್ರೆ ಫ್ಯಾನ್ಸ್ ಗೆ ಇನ್ನೇನೋ ಚಿಂತೆ

ಸಂತಾನೋತ್ಪತ್ತಿ ಸಂಗೀತ..ಕಾಂತಾರ ಚಾಪ್ಟರ್ 1 ಭಾಷಾಂತರ ಅವಾಂತರ

ಬರ್ತಡೇ ದಿನ ನಟ ಶಾರುಖ್‌ ಖಾನ್‌ಗೆ ಸಂಸದ ಶಶಿ ತರೂರ್‌ ಹೇಗೇ ಕಾಲೆಳೆಯುವುದಾ

ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್​ಗೆ 60ರ ಸಂಭ್ರಮ: ಮನೆಮುಂದೆ ಅಭಿಮಾನಿಗಳ ಜಾತ್ರೆ

ಆತಂಕದಲ್ಲಿರುವ ಫ್ಯಾನ್ಸ್‌ಗೆ ನಟ ಧರ್ಮೇಂದ್ರ ಆರೋಗ್ಯದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್‌

ಮುಂದಿನ ಸುದ್ದಿ
Show comments