ಶಂಕರ್ ನಾಗ್ ನೆನಪಿನಲ್ಲಿ: ಶಂಕ್ರಣ್ಣನಿಗೆ ಇಂದು 65 ನೇ ಹುಟ್ಟುಹಬ್ಬ

ಶನಿವಾರ, 9 ನವೆಂಬರ್ 2019 (10:17 IST)
ಬೆಂಗಳೂರು: ಕನ್ನಡ ಚಿತ್ರರಂಗದ ಸಕಲ ಕಲಾವಲ್ಲಭ ಎಂದರೆ ಪಕ್ಕನೇ ನೆನಪಾಗುವುದು ಶಂಕರ್ ನಾಗ್ ಹೆಸರು. ಅವರಿಗೆ ಇಂದು 65 ನೇ ಜನ್ಮದಿನದ ಸಂಭ್ರಮ.


ಅವರಲ್ಲಿ ಒಬ್ಬ ನಟ, ನಿರ್ದೇಶಕ ಮಾತ್ರವಲ್ಲ, ತಂತ್ರಜ್ಞನೂ ಇದ್ದ. ಮಾನವೀಯತೆಯ ಸಾಕಾರಮೂರ್ತಿಯಾಗಿದ್ದವರು. ಇಂದು ಬೆಂಗಳೂರಿನಲ್ಲಿ ತಲೆಯೆತ್ತುತ್ತಿರುವ ಮೆಟ್ರೋ ರೈಲಿನ ಕನಸನ್ನು ಅಂದೇ ಕಂಡ ಮಹಾನ್ ಕನಸುಗಾರ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಂದರೆ ಸಾಮಾನ್ಯರಿಗೆ ನಿಲುಕದ ನಕ್ಷತ್ರಗಳು. ಆದರೆ ಶಂಕ್ರಣ್ಣ ಅಟೋ ಚಾಲಕರಿಗೆ ಆರಾಧ್ಯ ದೈವ. ಕಷ್ಟಪಟ್ಟು ದುಡಿಯುವ ಕಾರ್ಮಿಕರಿಗೂ ಆದರ್ಶಪ್ರಾಯ. ಅವರನ್ನು ಇಂದಿಗೂ ಸೆಲೆಬ್ರಿಟಿಗಳಿಂದ ಹಿಡಿದು ಜನ ಸಾಮಾನ್ಯರೂ ತಮ್ಮ ಮನೆಯ ಮಗನಂತೆ ಆರಾಧಿಸುತ್ತಾರೆ ಎನ್ನುವುದೇ ವಿಶೇಷ. ಅಂತಹ ಮಹಾನ್ ದಿಗ್ಗಜನನ್ನು ಕನ್ನಡ ಸಿನಿಮಾ ರಂಗ ಇಂದು ನೆನಪು ಮಾಡಿಕೊಳ್ಳುತ್ತಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಯೋಧ್ಯೆ ತೀರ್ಪು ಹಿನ್ನಲೆ: ರುದ್ರಪ್ರಯಾಗ ಅಡಿಷನ್ ಮುಂದಕ್ಕೆ ಹಾಕಿದ ರಿಷಬ್ ಶೆಟ್ಟಿ