Webdunia - Bharat's app for daily news and videos

Install App

ಸತೀಶ್ ನೀನಾಸಂ ಚಿತ್ರಕ್ಕೆ ಕಾಲಿವುಡ್ ಸಂಗೀತ ನಿರ್ದೇಶಕನ ಬ್ಯಾಗ್ರೌಂಡ್ ಸ್ಕೋರ್..!!

Webdunia
ಶುಕ್ರವಾರ, 13 ಮಾರ್ಚ್ 2020 (13:08 IST)
ಟೀಸರ್ ಮೂಲಕ ಸ್ಯಾಂಡಲ್ವುಡ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ಮಾಡುತ್ತಿರುವ ಚಿತ್ರ ‘ಗೋದ್ರಾ’..ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್ ಅಭಿನಯದ ಈಚಿತ್ರದ ಎಫೆಕ್ಟಿವ್ ಟೀಸರ್ ಸಖರ್ ಬಝ್ ಹುಟ್ಟುಹಾಕಿತ್ತು. ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಕಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಕೆ.ಪಿ ಅವ್ರನ್ನು ಕರೆ ತಂದಿದ್ದಾರೆ.
ಕಾಲಿವುಡ್ ಚಿತ್ರರಂಗದಲ್ಲಿ ಜನಪ್ರಿಯರಾಗಿರುವ ಕೆ.ಪಿ ‘ಗೋದ್ರಾ’ ಮೂಲಕ ಸ್ಯಾಂಡಲ್ವುಡ್ ಅಂಗಳಕ್ಕೆ ಪರಿಚಿತರಾಗುತ್ತಿದ್ದು, ‘ಗೋದ್ರಾ’ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಭೋದಾಯಿ ಎರಿ, ಭೋದಿ ಮಾರಿ ಚಿತ್ರದ ಮೂಲಕ ಖ್ಯಾತಿ ಗಳಿಸಿರುವ ಕೆ.ಪಿ
ಗೋದ್ರಾ  ಚಿತ್ರಕ್ಕೆ ಬ್ಯಾಗ್ರೌಂಡ್ ಸ್ಕೋರ್ ನೀಡಲು ಒಪ್ಪಿಕೊಂಡಿದ್ದು ಚಿತ್ರದ ಮೇಲಿನನೀರೀಕ್ಷೆಯನ್ನು ಹೆಚ್ಚು ಮಾಡಿದೆ.
‘ಗೋದ್ರಾ’ ಪೊಲಿಟಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು, ನೈಜ ಘಟನೆಯಾಧಾರಿತ ಈ ಚಿತ್ರರಿಯಲಿಟಿಗೆ ಹತ್ತಿರವಾಗಿದೆ. ಸಮಾಜದಲ್ಲಿ ನಡೆಯುವ ಶೋಷಣೆಯ ವಿರುದ್ಧ ಬಂಡೆದ್ದು ಹೋರಾಟಗಾರನಾಗುವ ವ್ಯಕ್ತಿಯ ಕಥೆಯನ್ನು ‘ಗೋದ್ರಾ’ ಚಿತ್ರ ಹೇಳ ಹೊರಟಿದೆ. ಸತೀಶ್ನೀನಾಸಂ, ಶ್ರದ್ಧಾ ಶ್ರೀನಾಥ್ ಚಿತ್ರದಲ್ಲಿ ಪತ್ರಿಕೋಧ್ಯಮ ವಿದ್ಯಾರ್ಥಿಗಳಾಗಿ ಕಾಣಿಸಿಕೊಂಡಿದ್ದು,. ಚಿತ್ರದಲ್ಲಿ ಅಚ್ಯುತ್ ಕುಮಾರ್ ರಾಜಕಾರಣಿಯಾಗಿ, ವಸಿಷ್ಠ ಸಿಂಹಪೈಲೆಟ್ ಆಗಿ ಮಿಂಚಿದ್ದಾರೆ.
ಕೆ,ಎಸ್. ನಂದೀಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜ್ಯೂಡಾ ಸ್ಯಾಂಡಿ, ನವೀನ್ ಸಜ್ಜು, ಟೋನಿ ಜೋಸೆಫ್ ಮೂವರು ಸಂಗೀತ ನಿರ್ದೇಶಕರುಚಿತ್ರದ ಬೇರೆ ಬೇರೆ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ಹಿನ್ನೆಲೆ ಸಂಗೀತವನ್ನು ಕೆ.ಪಿ ನೀಡುತ್ತಿದ್ದಾರೆ. ಈಗಾಗಲೇ ಫೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ತೊಡಗಿರುವ ಚಿತ್ರತಂಡ ಸದ್ಯದಲ್ಲೇ ಚಿತ್ರದ ಟ್ರೈಲರ್ ಹಾಗೂ ಹಾಡುಗಳ ಮೂಲಕ ಲಗ್ಗೆ ಇಡಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ನಲ್ಲಿದ್ದ ರಿಷಬ್‌ ಶೆಟ್ಟಿಗೆ ದೊಡ್ಡ ಶಾಕ್‌: ಸಹ ಕಲಾವಿದ ಸಾವು, ಆಗಿದ್ದೇನೂ

ನಿಮ್ಮನ್ನು ಬ್ಯಾನ್ ಮಾಡಿದ್ರೆ ಕೆಎಫ್‌ಐಗೆ ‌ನಷ್ಟ: ಸೋನು ನಿಗಮ್‌ಗೆ ಬೆಂಬಲ ಸೂಚಿಸಿದ ಕನ್ನಡ ನಟಿಗೆ ತರಾಟೆ

Indian Idol 12 winner ಪವನ್‌ದೀಪ್ ರಾಜನ್ ಸ್ಥಿತಿ ನೋಡಕ್ಕಾಗಲ್ಲ

Sonu Nigam: ಸೋನು ನಿಗಂ ವಿವಾದ ಇಫೆಕ್ಟ್: ಇನ್ನು ಕನ್ನಡ ಹಾಡು ಕೇಳಿದ್ರೆ ಗಾಯಕರು ತಕ್ಷಣವೇ ಹಾಡಬೇಕು

Sonu Nigam: ನನ್ನ ಈ ವಯಸ್ಸಿನಲ್ಲಿ ನನ್ನ ಮಗನ ವಯಸ್ಸಿನವನು ಬೆದರಿಸಿದರೆ ಸುಮ್ಮನಿರಬೇಕೇ: ಕನ್ನಡ ವಿವಾದಕ್ಕೆ ಸೋನು ನಿಗಂ ಉತ್ತರ

ಮುಂದಿನ ಸುದ್ದಿ
Show comments