Select Your Language

Notifications

webdunia
webdunia
webdunia
webdunia

ವಿದೇಶದಲ್ಲೂ ತೆರೆ ಕಾಣಲಿರುವ ಸಂತು ಸ್ಟ್ರೈಟ್ ಫಾರ್ವರ್ಡ್

ವಿದೇಶದಲ್ಲೂ ತೆರೆ ಕಾಣಲಿರುವ ಸಂತು ಸ್ಟ್ರೈಟ್ ಫಾರ್ವರ್ಡ್
Bangalore , ಶನಿವಾರ, 19 ನವೆಂಬರ್ 2016 (14:09 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ವಿದೇಶಕ್ಕೆ ತೆರಳಲಿದ್ದಾರೆ. ಡಿಸೆಂಬರ್ ನಲ್ಲಿ ಮದುವೆ ಇಟ್ಟುಕೊಂಡು ವಿದೇಶಕ್ಕೆ ತೆರಳಿದ್ದು ಯಾಕೆ ಎಂದು ನಿಮಗೆ ಅನಿಸಬಹುದು. ಅವರ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರ ವಿದೇಶದಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕೇ ಈ ಪೀಠಿಕೆ.

ಈಗೀಗ ವಿದೇಶದಲ್ಲೂ ಕನ್ನಡ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷವೇನಲ್ಲ. ಅಂತೆಯೇ ಇಂದು ಅಮೆರಿಕಾ, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನಾದ್ಯಂತ ಯಶ್ ಅಭಿನಯದ ಸಂತು ಚಿತ್ರ ಬಿಡುಗಡೆಯಾಗುತ್ತಿದೆ. ತಮ್ಮ ಚಿತ್ರವನ್ನು ಬೆಂಬಲಿಸುವಂತೆ ಯಶ್ ಫೇಸ್ ಬುಕ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಈಗಾಗಲೇ 25 ದಿನ ಪೂರೈಸಿ ಯಶಸ್ವಿಯಾಗಿ ಓಡುತ್ತಿರುವ ಸಂತು ಚಿತ್ರ ಈಗಾಗಲೇ ನಿರ್ಮಾಪಕರ ಜೇಬು ತುಂಬಿಸಿದೆ. ವಿದೇಶದಲ್ಲೂ ಇದೇ ಮೋಡಿ ಮಾಡುತ್ತದಾ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ವಿಮರ್ಶೆ: ಬದ್ಮಾಶ್ ನ ಆಟ ಒಮ್ಮೆ ನೋಡಬಹುದು