Select Your Language

Notifications

webdunia
webdunia
webdunia
webdunia

’ಬಿಳಿ ಕುದುರೆ’ ಹತ್ತಿದ ಸಂಚಾರಿ ವಿಜಯ್

’ಬಿಳಿ ಕುದುರೆ’ ಹತ್ತಿದ ಸಂಚಾರಿ ವಿಜಯ್
Bangalore , ಮಂಗಳವಾರ, 10 ಜನವರಿ 2017 (14:38 IST)
`ನಾನು ಅವನಲ್ಲ ಅವಳು’ ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದಿರುವ ಸಂಚಾರಿ ವಿಜಯ್ ನಾಯಕರಾಗಿರುವ ಪ್ರಥಮ ಕಮರ್ಷಿಯಲ್ ಚಿತ್ರ `ಬಿಳಿ ಕುದುರೆ’.  ವಿಭಿನ್ನ ಪ್ರೇಮಕಥೆ 
ಹೊಂದಿರುವ ಈ ಚಿತ್ರ ಅಚ್ಚುಕಟ್ಟಾಗಿ ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ಮರಳಿದೆ.
 
ಕಳೆದ ಮೂವತ್ತು ವರ್ಷಗಳಿಂದಲೂ ಚಿತ್ರರಂಗದಲ್ಲಿ ಕಲಾವಿದರಾಗಿ, ತಂತ್ರಜ್ಞರಾಗಿ ಅನುಭವ ಹೊಂದಿರುವ ನಂದಕುಮಾರ್ ಅವರು ಈ ಚಿತ್ರವನ್ನು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಬಣ್ಣದಲೋಕ ಫಿಲಂಸ್ ಲಾಂಛನದಲ್ಲಿ ಈ ಚಿತ್ರ ಮೂಡಿ ಬಂದಿದೆ.
 
ಮಲೆನಾಡಿನ ಮಡಿಲಲ್ಲಿರುವ ಚಿಕ್ಕಮಗಳೂರು ಮತ್ತು ಮಡಿಕೇರಿಯ ಚೆಂದದ ತಾಣಗಳಲ್ಲಿ, ಭವ್ಯವಾದ ಬಂಗಲೆ ಮತ್ತು ಎಸ್ಟೇಟುಗಳಲ್ಲಿ ಲವ್, ಸೆಂಟಿಮೆಂಟ್, ಆಕ್ಷನ್, ಥ್ರಿಲ್ಲಿಂಗ್ 
ದೃಶ್ಯಾವಳಿಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಸತತವಾಗಿ ಮೂವತೈದು ದಿನಗಳ ಕಾಲ ಹಗಲು ರಾತ್ರಿಯೆನ್ನದೇ ಚಿತ್ರೀಕರಣ ನಡೆದಿದೆ. ಇದಲ್ಲದೇ ಮುಂಬೈ ಸುತ್ತಮುತ್ತಲೂ ಚಿತ್ರೀಕರಣ ನಡೆಸಿರುವ ಚಿತ್ರತಂಡ ಬೆಂಗಳೂರಿಗೆ ಹಿಂತಿರುಗಿದೆ.
 
ಇನ್ನುಳಿದ ಎರಡು ದಿನಗಳ ಕಾಲದ ಮಾತಿನ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿಯೇ ನಡೆಯಲಿದೆ. ಈ ಭಾಗದಲ್ಲಿ ವಿಶೇಷ ಪಾತ್ರವೊಂದರಲ್ಲಿ ರಾಜ್ಯ ಪ್ರಶಸ್ತಿ ವಿಜೇತ ನಟಿ ತಾರಾ 
ಅನುರಾಧಾರವರು ಅಭಿನಯಿಸುತ್ತಿದ್ದಾರೆ. ಹೀಗೆ ಮುಖ್ಯ ಭಾಗಗಳನ್ನು ಮುಗಿಸಿಕೊಂಡಿರುವ ಈ ಚಿತ್ರದ ನಾಲ್ಕು ಹಾಡುಗಳು ಮಾತ್ರ ಬಾಕಿ ಉಳಿದಿದೆ. 
 
ಈಚಿತ್ರಕ್ಕೆ ಹಂಸಲೇಖ ಅವರ ಸಾಹಿತ್ಯ, ಗೋಪಿ ಸಂಗೀತ ನಿರ್ದೇಶನ, ಯಾದವ್ ರಾಜ್ ಚೆನೈ ಛಾಯಾಗ್ರಹಣ, ಲಕ್ಷ್ಮಣ ರೆಡ್ಡಿ, ಯಶಸ್ ಶೆಟ್ಟಿ ಮುಂಬೈ ಅವರ ಸಂಕಲನ, ಸುರೇಶ್ ಗುಟ್ಟಹಳ್ಳಿ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು ಮತ್ತು ಅಪ್ಪು ವೆಂಕಟೇಶ್ ಸಾಹಸ ನಿರ್ದೇಶನ, ಭವಾನಿ ಶಂಕರ್, ಪರಮೇಶ್ವರನ್, ಸಂಜಯ್, ಯೋಗರಾಜ್ ಮತ್ತು ರೋಹಿತ್ ನಿರ್ದೇಶನ ಸಹಾಯ ಹಾಗೂ ವಜ್ರೇಶ್ವರಿ ಮಲ್ಲಿಕಾರ್ಜುನ್ ಅವರ ಮೇಲ್ವಿಚಾರಣೆ ಇದೆ.
 
ಸಂಚಾರಿ ವಿಜಯ್, ಶೋಭರಾಜ್, ತಾರಾ ಅನುರಾಧ, ನಂದಕುಮಾರ್, ಸಾಗರ್, ರಾವುಲ್, ಆರ್ಯನ್, ಯುವರಾಜ್, ಶಕುಂತಲಶ್ರೀ, ಮಂಜುನಾಥ್, ಮಂಡ್ಯ ಸತ್ಯರಾಜ್, ಟಿ ವಿ ಕಿರಣ್, ಪರಮೇಶ್ವರನ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಮುಂಬೈ ಮೂಲದ ಮಾಡೆಲ್ ರಶ್ಮಿ ಬಲ್ಲಾ ಹಾಗೂ ನವ್ಯಶ್ರೀ ನಾಯಕಿಯರಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆ ಗಾಸಿಪ್‌ನಿಂದ ಮನಸ್ಸಿಗೆ ತುಂಬಾ ನೋವಾಯಿತು