Select Your Language

Notifications

webdunia
webdunia
webdunia
webdunia

ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಕಾಳಿಗಿಂತ ಜೊಳ್ಳೇ ಜಾಸ್ತಿ

ಸ್ಯಾಂಡಲ್‌ವುಡ್ 2016
Bangalore , ಶುಕ್ರವಾರ, 23 ಡಿಸೆಂಬರ್ 2016 (12:56 IST)
ಈ ವರ್ಷ ಸ್ಯಾಂಡಲ್‍ವುಡ್ ಪಾಲಿಗೆ ಮಿಶ್ರ ಪ್ರತಿಫಲ ಸಿಕ್ಕಂತ ವರ್ಷ. 2016ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ಚಿತ್ರಗಳ ಸಂಖ್ಯೆ 173 (ಡಿಸೆಂಬರ್ ಅಂತ್ಯಕ್ಕೆ 6 ಸಿನಿಮಾ ಬಿಡುಗಡೆ ಆಗಲಿರುವುದು ಸೇರಿ). ಆದರೆ ಚಿತ್ರಮಂದಿರದಲ್ಲಿ ಗಟ್ಟಿಯಾಗಿ ಕಚ್ಚಿಕೊಂಡಿದ್ದು ಮಾತ್ರ ಬೆರಳೆಣೆಯಷ್ಟು ಚಿತ್ರಗಳು.
 
ಕಾಳಿಗಿಂಗ ಜೊಳ್ಳೇ ಜಾಸ್ತಿ ಎಂಬಂತೆ ಈ ವರ್ಷ ಬಂದ ಚಿತ್ರಗಳಲ್ಲಿ ಅಂತಹ ಸಾರ ಇರಲಿಲ್ಲ. ಸಂತು ಸ್ಟ್ರೈಟ್ ಫಾರ್ವಡ್, ಮುಂಗಾರು ಮಳೆ 2, ನಟರಾಜ ಸರ್ವೀಸ್, ಕೋಟಿಗೊಬ್ಬ 2, ದೊಡ್ಮನೆ ಹುಡುಗ ಚಿತ್ರಗಳು ನಿರೀಕ್ಷಿಸಿದ ಪ್ರಮಾಣದಲ್ಲಿ ಸದ್ದು ಮಾಡಲಿಲ್ಲ. 
 
ಮೂವರು ರಾಜಕಾರಣಿ ಮಕ್ಕಳು ಈ ವರ್ಷ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಜಾಗ್ವಾರ್ ಮೂಲಕ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್, ಲಕ್ಷ್ಮಣ ಮೂಲಕ ಎಚ್ ರೇವಣ್ಣ ಮಗ ಅನೂಪ್, ಹ್ಯಾಪಿ ಬರ್ತ್ ಡೇ ಸಿನಿಮಾ ಮೂಲಕ ಚೆಲುವರಾಯ ಸ್ವಾಮಿ ಪುತ್ರ ಸಚಿನ್ ಎಂಟ್ರಿ ಕೊಟ್ಟಿದ್ದಾರೆ.
 
ವಿಶೇಷ ಎಂದರೆ ಕೇವಲ ನಾಲ್ಕೇ ನಾಲ್ಕು ಚಿತ್ರಗಳು ಸೆಂಚುರಿ ಪೂರೈಸಿವೆ. ಶಿವಲಿಂಗ, ಅಕಿರಾ, ಜೂಮ್ ಮತ್ತು ಕ್ರೇಜಿಬಾಯ್ ಸೆಂಚುರಿ ಬಾರಿಸಿದ ಚಿತ್ರಗಳು. ಕಿಲ್ಲಿಂಗ್ ವೀರಪ್ಪನ್, ಜಗ್ಗುದಾದಾ, ಜಾಗ್ವಾರ್, ಲಕ್ಷ್ಮಣ, ನೀರ್ ದೋಸೆ, ನಾನಿ, ಕರ್ವ, ರಾಮ ರಾಮ ರೇ ಚಿತ್ರಗಳು ಐವತ್ತು ದಿನ ಪೂರೈಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿ ಮಕ್ಕಳಿಂದ ಡಾ.ವಿಷ್ಣುವರ್ಧನ್ 7ನೇ ಪುಣ್ಯಸ್ಮರಣೆ