ಕನ್ನಡದ ಸಿನಿಮಾ-ಟಿ.ವಿ ಕ್ಷೇತ್ರಗಳ ಸಾವಿರಾರು ಸಂಪರ್ಕಗಳನ್ನು ನಿರಂತರವಾಗಿ `ಸಿನಿಮಾ-ಟಿ.ವಿ ಡೈರೆಕ್ಟರಿ’ ಮೂಲಕ ಕಳೆದ 18 ವರ್ಷಗಳಿಂದ ನೀಡುತ್ತಾ ಬಂದಿರುವ ಹೆಗ್ಗಳಿಕೆ `ನಂದಿನಿ ಪಬ್ಲಿಕೇಷನ್ಸ್’ ಸಂಸ್ಥೆಯದು.
ಒಂದು ವರ್ಷದ ಹಿಂದೆ ಇದರ 7ನೇ ಸಂಪುಟ ಬಿಡುಗಡೆ ಕಂಡಿತ್ತು. ಮುದ್ರಿಸಿದ ಡೈರಿಗಳು ಮುಗಿದಿದ್ದರಿಂದ ಮತ್ತು ಪ್ರತಿಗಳ ಬೇಡಿಕೆ ಹೆಚ್ಚಿದ್ದರಿಂದ, ಡೈರೆಕ್ಟರಿ ಈಗ ಪರಿಷ್ಕೃತಗೊಂಡು, ಒಂದಿಷ್ಟು ಬದಲಾದ ವಿಳಾಸ ಮತ್ತು ಹೊಸ ಸಂಪರ್ಕಗಳನ್ನು ಸೇರ್ಪಡೆ ಮಾಡಿಕೊಂಡು, ಹೊಸ ರೂಪದಲ್ಲಿ ಬರಲಿದೆ.
18 ವರ್ಷಗಳ ಹಿಂದೆ ಕೇವಲ ಫೋನ್ ನಂಬರ್‍ಗಳನ್ನಷ್ಟೇ ಸೇರಿಸಿಕೊಂಡು 100 ಪುಟಗಳೊಂದಿಗೆ ಬಿಡುಗಡೆ ಕಂಡಿದ್ದ ಕೈಪಿಡಿ, ಕಳೆದ ವರ್ಷ ಫೋನ್, ಮೊಬೈಲ್, ಇ ಮೇಲ್, ವೆಬ್‍ಸೈಟ್ ಸೇರಿಸಿಕೊಂಡು 600ಪುಟಗಳೊಂದಿಗೆ ಬಿಡುಗಡೆಯಾಗಿತ್ತು.
ಇದು ಎರಡೂ ರಂಗಗಳು ದೊಡ್ಡ ಮಟ್ಟದಲ್ಲಿ ಬೆಳೆದಿರುವ ಸಂಕೇತ ಎಂದಿರುವ ಡೈರೆಕ್ಟರಿ ಸಂಪಾದಕ ಎಂ.ಜಿ. ಲಿಂಗರಾಜ್, ಡೈರಿಗೆ ಹೊಸ ಸೇರ್ಪಡೆ ಮಾಡುವವರು ಈ ಮುಂದಿನ ವಿಳಾಸಕ್ಕೆ ಮಾಹಿತಿ ನೀಡಬೇಕೆಂದು ಕೋರಿದ್ದಾರೆ. ನಂದಿನಿ ಪಬ್ಲಿಕೇಷನ್ಸ್, ನಂ- 44 ವೆಂಕಟ್ ಬ್ಯುಸಿನೆಸ್ ಚೇಂಬರ್ಸ್, 2ನೇ ಮೇನ್, ವಿನಾಯಕ ಸರ್ಕಲ್, ವೈಯಾಲಿಕಾವಲ್ ಬೆಂಗಳೂರು-
560 003. ಮೊ: 94486 13976
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.